ಮೂಡುಬಿದಿರೆ: ಕಲ್ಲಮುಂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಹಿಂದುಳಿದ ವರ್ಗ 'ಎ' ಕ್ಷೇತ್ರದಿಂದ ಸತೀಶ್ ಕಲ್ಲಮುಂಡ್ಕೂರು ಹಾಗೂ ಸಾಮಾನ್ಯ ಕ್ಷೇತ್ರದಿಂದ ವಸಂತ್ ಭಟ್ ಆಯ್ಕೆಯಾಗಿದ್ದಾರೆ.

ಸತೀಶ್ ಮೂರನೇ ಬಾರಿ ಹಾಗೂ ವಸಂತ್ ಭಟ್ ನಾಲ್ಕನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.