ವೇಣೂರು: ಬಂಟರ ಗ್ರಾಮ ಸಮಿತಿ ಹೊಸಂಗಡಿ ಬಡಕೋಡಿ ನೇತೃತ್ವದಲ್ಲಿ ಎರಡನೇ ವರ್ಷದ 'ಕೆಸರ್ ಡ್ ಒಂಜಿ ದಿನ' ಕಾರ್ಯಕ್ರಮವು ಪೆರಿಂಜೆಯ ನೂಯಿ ವನಜ ಶೆಟ್ಟಿ ಗದ್ದೆಯಲ್ಲಿ ಎನ್. ಸೀತಾರಾಮ ರೈ ಅಧ್ಯಕ್ಷತೆಯಲ್ಲಿ ನೆರವೇರಿತು.

ಎಲ್ಲಾ ವಯೋಮಾನದವರಿಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾದ ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬಂಟ ಸಮುದಾಯದ ಐವರು ಸಾಧಕರನ್ನು ಸನ್ಮಾನಿಸಲಾಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘ ಬೆಳ್ತಂಗಡಿ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿ ಗುಡ್ಡೆ ವಹಿಸಿದ್ದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಸುಮಾರು ನೂರೈವತ್ತು ಸ್ಪರ್ಧಿಗಳಿಗೆ ಪಾರಿತೋಷಕವಾಗಿ ವಿವಿಧ ತಳಿಯ ಹಣ್ಣುಗಳ ಗಿಡಗಳನ್ನು ವಿತರಿಸಿ, ನಮ್ಮ ಪರಿಸರವನ್ನು ಹಸಿರಾಗಿಸೋಣ ಎಂಬ ಧ್ಯೇಯವನ್ನು ಜಾಗೃತಗೊಳಿಸಲಾಯಿತು.

ಅತಿಥಿಗಳಾಗಿ ಬಂಟರ ಸಂಘ ಬೆಳ್ತಂಗಡಿ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಬಂಟರ ಗ್ರಾಮ ಸಮಿತಿ ಹೊಸಂಗಡಿ ಬಡಕೋಡಿ ಅಧ್ಯಕ್ಷ ರವಿಚಂದ್ರ ಶೆಟ್ಟಿ, ಬೆಂಗಳೂರು ಉದ್ಯಮಿ ಪ್ರಶಾಂತ್ ಎನ್ ಶೆಟ್ಟಿ, ಡಾ ಸಂಗೀತಾ ಶೆಟ್ಟಿ ಪೆರಿಂಜೆ, ಬಹ್ರೈನ್ ರೇಷ್ಮಾ ಗೋಪಾಲ್ ಶೆಟ್ಟಿ, ಶಾರದಾ ಶೆಟ್ಟಿ ಬಲ್ಲಂಗೇರಿಗುತ್ತು, ವಿಶಾಲ್ ಕೀರ್ತಿ ರೈ, ಲೋಹಿತ್ ರೈ ಹಾಗೂ ಸುಧಾಕರ್ ಶೆಟ್ಟಿ ಹಂಕರೋಡಿ ಉಪಸ್ಥಿತರಿದ್ದರು. ದುರ್ಗಾಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು