ಮೂಡುಬಿದಿರೆ: ಕರ್ನಾಟಕ ನಿವೃತ್ತ ಸರ್ಕಾರಿ ನೌಕರರ ಸಂಘದ ಮೂಡುಬಿದಿರೆ ಶಾಖೆಯ 2026-2028ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪ್ರೇಮ ಚಂದ್ರಶೇಖರ ರಾವ್ ಆಯ್ಕೆಯಾಗಿದ್ದಾರೆ. ಸಂಘದ ಕಾರ್ಯದರ್ಶಿಯಾಗಿ ಪದ್ಮನಾಭ ಎಚ್. ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಉಪಾಧ್ಯಕ್ಷರಾಗಿ ಅನಂತಪದ್ಮನಾಭ ಹೊಳ್ಳ ಮತ್ತು ರವೀಶ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ಶಾಲಿನಿ ಸುಧಾಕರ್ ಹಾಗೂ ಕೋಶಾಧಿಕಾರಿಯಾಗಿ ದಿನೇಶ್ ಭಂಡಾರ್ಕರ್ ಆಯ್ಕೆಯಾಗಿದ್ದಾರೆ. ಸಂಘದ ಆಡಳಿತ ಮಂಡಳಿಯ ಸದಸ್ಯರಾಗಿ ಸತ್ಯಪ್ರಕಾಶ್, ಸುಬ್ರಹ್ಮಣ್ಯ ಮತ್ತು ಸಕೀನಾ ಆಯ್ಕೆಯಾದ್ದಾರೆ.