ಮೂಡುಬಿದಿರೆ: ನೆಲ್ಲಿಕಾರು ಗ್ರಾಮ ಪಂಚಾಯತ್ ಹಾಗೂ ಅರಿವು ಕೇಂದ್ರ ನೆಲ್ಲಿಕಾರು ಗ್ರಾಮ ಪಂಚಾಯತ್ ಗ್ರಂಥಾಲಯದ ಜಂಟಿ ಆಶ್ರಯದಲ್ಲಿ ಬುಧವಾರ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ಐದು ದಿನಗಳ ಕಾಲ ನಡೆಯುವ ಈ ಶಿಬಿರವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜು ಉದ್ಘಾಟಿಸಿ, ಶಿಬಿರದ ಮಹತ್ವ ಹಾಗೂ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ನೆಲ್ಲಿಕಾರು ಪ್ರೌಢ ಶಾಲೆಯ ಶಿಕ್ಷಕ ಭೈರವೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಗ್ರಂಥಾಲಯದ ಮೂಲಕ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದು ನುಡಿದರು. ಶಿಬಿರದಲ್ಲಿ 40ಕ್ಕೂ ಹೆಚ್ಚು ಮಕ್ಕಳು ಹೆಸರು ನೋಂದಾಯಿಸಿಕೊಂಡು ಪಾಲ್ಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಪಂಚಾಯತ್ ಕಾರ್ಯದರ್ಶಿ ದಾಮೋದರ್, ಗ್ರಾಮ ಪಂಚಾಯತ್ ಗ್ರಂಥಾಲಯ ಸಲಹಾ ಸಮಿತಿ ಸದಸ್ಯರಾದ ಪ್ರಸನ್ನ ಬಲ್ಲಾಳ್, ವಿಠಲ ಬುಣ್ಣನ್, ಲತಾ, ಧನಿಶ್, ಪ್ರಜ್ಞಾ, ಶಾಲಾ ಶಿಕ್ಷಕಿ ರಾಧಿಕಾ, ಸೌಮ್ಯ, ಪಂಚಾಯತ್ ರಾಜ್ ಇಲಾಖೆಯ ರಾಜ್ಯ ತರಬೇತುದಾರ ದೇವಕಿ ಮಾಂಟ್ರಾಡಿ, ಗ್ರಾಮಸ್ಥರಾದ ವಿದೇಶ ಪೂಜಾರಿ, ಸುನೀತಾ ಹಂಪೆಜಾಲು, ಲತಾ ಬಳೆಂಜ, ಸಂಜೀವಿನಿ ಒಕ್ಕೂಟದ ಗೀತಾ, ಬೇಸಿಗೆ ಶಿಬಿರದ ತರಬೇತುದಾರ ಸಕೇಶ್ ಬುಣ್ಣನ್, ಮದುಮತಿ ಮಾಂಟ್ರಾಡಿ, ಗೀತಾ ಮಾಂಟ್ರಾಡಿ, ಪಂಚಾಯತ್ ಸಿಬ್ಬಂದಿಗಳಾದ ರೇಣುಕಾ, ಲಕ್ಷ್ಮಣ, ಪ್ರಜ್ಞಾ, ಸುನೀತಾ ಹಾಗೂ ದಿಶಾ ಟ್ರಸ್ಟ್‌ನ ರಂಜಿನಿ ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ಪ್ರಶಾಂತ್ ಕುಮಾರ್ ಜೈನ್ ಸ್ವಾಗತಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಪ್ರಮೀಳಾ ವಂದಿಸಿದರು.