ಮೂಡುಬಿದಿರೆ: ಕಲ್ಲಮುಂಡ್ಕೂರು ಬಿಲ್ಲವರ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಜರುಗಿತು. ಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಸುಕುಮಾರ್ ಸನಿಲ್ ಮುಡಾಯಿಬೆಟ್ಟು ಹಾಗೂ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ವಿನಯ ಕೊಟ್ಯಾನ್ ಕಲ್ಲಮುಂಡ್ಕೂರು ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಸತೀಶ್ ಅಮೀನ್ ತೊಡಂಕಿಲ, ಗೌರವಾಧ್ಯಕ್ಷರುಗಳಾಗಿ ಸದಾನಂದ ಪೂಜಾರಿ ಪಾದೆ, ಎಂ. ಬಿ. ಕರ್ಕೇರ ನಿಖಿಶಾ ಟವರ್ಸ್ ನಿಡ್ಡೋಡಿ, ಸುಂದರ್ ವಿ. ಬಂಗೇರ ನಲ್ಕೆಮಾರು ಅವರನ್ನು ಸರ್ವಾನುಮತದಿಂದ ಆರಿಸಲಾಯಿತು. ಗೌರವ ಸಲಹೆಗಾರರಾಗಿ ಜಾನು ಪೂಜಾರಿ ಉಲ್ಲೊಟ್ಟು, ಸಂದೀಪ್ ಸಾಲ್ಯಾನ್ ಕುತ್ತಟ್ಟ ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರುಗಳಾಗಿ ಸಂದೀಪ್ ಸುವರ್ಣ ನಿಡ್ಡೋಡಿ, ಭೋಜ ಸುವರ್ಣ ನೆಕ್ಕರೆ, ಮಧು ಕುಮಾರ್ ಕೊರೆದು, ಸತೀಶ್ ಪೂಜಾರಿ ಕಾನ, ಮೋಹನ್ ಅಮೀನ್ ಇಂದಿರಾ ನಗರ, ಮಹಾಬಲ ಪೂಜಾರಿ ನಡಿಕೆರೆ, ಲೋಕಯ್ಯ ಪೂಜಾರಿ ಅಡಿಕೆಬೆಟ್ಟು, ಕಾರ್ಯದರ್ಶಿಯಾಗಿ ಧನಂಜಯ ಅಮೀನ್ ತಾರಂಗಡಿ, ಜಂಟಿ ಕಾರ್ಯದರ್ಶಿಗಳಾಗಿ ಸುಧಾಕರ್ ಅಮೀನ್ ತೊಡಂಕಿಲ, ಕರುಣಾಕರ ಸುವರ್ಣ ಉಲ್ಲೊಟ್ಟು, ಮೇಘನಾಥ ಕೊಟ್ಯಾನ್ ಬಾನಂಗಡಿ ಆಯ್ಕೆಯಾಗಿದ್ದಾರೆ. ಜಂಟಿ ಖಜಾಂಚಿಗಳಾಗಿ ಮೋಹನ್‌ದಾಸ್ (ಟೈಲರ್), ಉದಯ ಅಂಚನ್ ಬಾನಂಗಡಿ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಗೋಕುಲದಾಸ್ ಕರ್ಕೇರ ಬಾನಂಗಡಿ ಅವರನ್ನು ನಿಯೋಜಿಸಲಾಗಿದೆ. ಕಾರ್ಯಾಧ್ಯಕ್ಷರುಗಳಾಗಿ ವಾಸುದೇವ ಸುವರ್ಣ ತಾರಂಗಡಿ, ಸುಕುಮಾರ್ ಅಮೀನ್ ನಂದನ ಬಾನಂಗಡಿ, ನಿರ್ವಹಣಾ ಮೇಲ್ವಿಚಾರಕರಾಗಿ ರಾಮಾನಂದ ಸುವರ್ಣ ಕೊಪ್ಪಲ, ಸಂಘಟನಾ ಕಾರ್ಯದರ್ಶಿಗಳಾಗಿ ರವಿ ಪೂಜಾರಿ ತೋಡಂಕಿಲ, ಪ್ರಜ್ವಲ್ ಅಮೀನ್ ದೈಲಬೆಟ್ಟು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಭಜನಾ ಮುಖ್ಯಸ್ಥರುಗಳಾಗಿ ಗೋಪಾಲಕೃಷ್ಣ ಕೊಟ್ಯಾನ್ ಬಾನಂಗಡಿ, ಗಣೇಶ್ ಆರ್ದೊಟ್ಟು, ಬಾಲಕೃಷ್ಣ ಅಂಚನ್ ಮಿತ್ತ ಮಾಣಿಲ, ಸುಂದರ್ ಕೊಟ್ಯಾನ್ ಮೈಲೊಟ್ಟು ಹಾಗೂ ಅರ್ಚಕರಾಗಿ ಗೋವಿಂದ ಸನಿಲ್ ಮುರಂತಬೆಟ್ಟು ಆಯ್ಕೆಯಾಗಿದ್ದಾರೆ.