ಮೂಡುಬಿದಿರೆ: ಪತ್ತನಾಜೆ ನಿಮಿತ್ತ ವಾರ್ಷಿಕ ಮಳೆ ಹಾಗೂ ಬೆಳೆ ಸಮೃದ್ಧಿಗಾಗಿ ನಾಗದೇವರಿಗೆ ತನು ತಂಬಿಲ ಸೇವೆ, ಹಾಲಾಭಿಷೇಕ, ಸಿಯಾಳಾಭಿಷೇಕ ಮತ್ತು ದೈವಗಳಿಗೆ ಪರ್ವಸೇವೆಯು ಕುಡುಬಿ ಸಮಾಜದ ಪ್ರಮುಖ ಕೇಂದ್ರವಾದ ಕೊಂಪದವು ಸಂಕೇಶ ನಾಗಬನದಲ್ಲಿ ಜರುಗಿತು.
ಮಂಗಳೂರಿನ ವೇದಮೂರ್ತಿ ಪ್ರಭಾಕರ್ ಭಟ್ ಪೌರೋಹಿತ್ಯದಲ್ಲಿ ಈ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ನೂರಾರು ಕುಡುಬಿ ಕುಟುಂಬಗಳು ಭಾಗವಹಿಸಿ ದೇವರ ಸೇವೆ ಮಾಡಿ ಪ್ರಸಾದ ಸ್ವೀಕರಿಸಿದರು.