ಮೂಡುಬಿದಿರೆ: ಮೂಡುಮಾರ್ನಾಡು ಪಿ.ಎಂ.ಶ್ರೀ. ಸರ್ಕಾರಿ ಪ್ರೌಢಶಾಲೆಯಲ್ಲಿ ಉಡುಪಿ ಜಿಲ್ಲೆಯ ಜಿ.ಎಸ್.ಬಿ. ಸಮಾಜ ಹಿತರಕ್ಷಣಾ ವೇದಿಕೆ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಮಕ್ಕಳ ಗುರುತುಚೀಟಿ ಹಾಗೂ ನೋಟ್ ಪುಸ್ತಕ ವಿತರಿಸಲಾಯಿತು.

ವೇದಿಕೆಯ ಪರವಾಗಿ ವಿದ್ಯಾಪೋಷಕ್ ಸಮಿತಿಯ ಸಂಚಾಲಕ ವಿಜಯ ವಿಶ್ವನಾಥ್ ಶೆಣೈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಯ ಶೈಕ್ಷಣಿಕ ಸಾಧನೆಗಳನ್ನು ಪ್ರಶಂಸಿಸಿದರು. ಮುಂದಿನ ದಿನಗಳಲ್ಲಿ ಶಾಲೆಯ ಅಭಿವೃದ್ಧಿಗೆ ವೇದಿಕೆಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಶಾಲೆಯ ವತಿಯಿಂದ ವಿಜಯ ವಿಶ್ವನಾಥ್ ಶೆಣೈ ಅವರನ್ನು ಸನ್ಮಾನಿಸಲಾಯಿತು.

ಪ್ರಭಾರ ಮುಖ್ಯ ಶಿಕ್ಷಕಿ ಸುಜಾತ, ಶಿಕ್ಷಕರಾದ ನವೀನ್ ಆರ್ ಪುತ್ರನ್, ಜೋನ್ ರೊನಾಲ್ಡ್, ಸುಮಿತಾ, ಬಾಬಿ, ಛಾಯಾ ಕಿಣಿ ಹಾಗೂ ವೀಕ್ಷಿತಾ ಉಪಸ್ಥಿತರಿದ್ದರು.