ಮೂಡುಬಿದಿರೆ: ನೆಲ್ಲಿಕಾರು ಗ್ರಾಪಂ, ಪಂಚಾಯಿತಿ ಅರಿವು ಕೇಂದ್ರ ಮತ್ತು ಗ್ರಂಥಾಲಯ ಇವುಗಳ ಜಂಟಿ ಆಶ್ರಯದಲ್ಲಿ ಐದು ದಿನಗಳು ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವು ಸೋಮವಾರ ಸಂಪನ್ನಗೊಂಡಿತು. ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಪಿಡಿಒ ರಾಜು, ಪಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಬೇಕು ಶಿಬಿರದಲ್ಲಿ ಕಲಿತ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಗ್ರಾಪಂ ಮಾಜಿ ಸದಸ್ಯ ಚಾರ್ಲ್ಸ್ ಸಾಂತ್ ಮಯೋರ್, ಮೂಡುಬಿದಿರೆ ಪ್ರೆಸ್ ಕ್ಲಬ್ ಕಾರ್ಯದರ್ಶಿ ಪ್ರೇಮಶ್ರೀ ಕಲ್ಲಬೆಟ್ಟು, ಬೋರುಗುಡ್ಡೆ ಶಾಲೆಯ ಶಿಕ್ಷಕಿ ಸೌಮ್ಯ, ಗೌರವ ಶಿಕ್ಷಕಿ ಹರಿಣಾಕ್ಷಿ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ದೇವಕಿ ಉಪಸ್ಥಿತರಿದ್ದರು. ಗೀತಾ, ಸುನೀತಾ, ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯೆ ಲತಾ, ಸುಗ್ರಾಮ್ ವೇದಿಕೆಯ ಸದಸ್ಯೆ ಕಮಲಾ ಮತ್ತು ಗ್ರಂಥಾಲಯ ಮೇಲ್ವಿಚಾರಿಕಿ ಪ್ರಮೀಳಾ ಉಪಸ್ಥಿತರಿದ್ದರು. ಶಿಬಿರಾರ್ಥಿ ಶ್ರೇಯ ಸ್ವಾಗತಿಸಿದರು. ಸಿಬ್ಬಂದಿ ಪ್ರಶಾಂತ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಬಿಂದು ವಂದಿಸಿದರು.