ಮೂಡುಬಿದಿರೆ: ಪುತ್ತಿಗೆಯ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಸಮೀಪವಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ಮೇ 29ರಂದು ವಾರ್ಷಿಕ ಪ್ರತಿಷ್ಠಾ ಮಹೋತ್ಸವವು ಜರುಗಲಿದೆ. ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಮೇ 29ರ ಶುಕ್ರವಾರ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ಬೆಳಿಗ್ಗೆ ಗಣಹೋಮ, ನವಕ ಕಲಶ, ಪ್ರಧಾನ ಹೋಮ, ಕಲಶಾಭಿಷೇಕ ಮತ್ತು ಅಲಂಕಾರ ಪೂಜೆ ನೆರವೇರಲಿದೆ. ಮಧ್ಯಾಹ್ನ ಮಹಾಪೂಜೆ ನಡೆದು, ಗಂಟೆ 1.00ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ . ಸಂಜೆ 7.30ಕ್ಕೆ ನಿತ್ಯಪೂಜೆ, ರಂಗಪೂಜೆ ಹಾಗೂ ಪ್ರಸಾದ ವಿತರಣೆಯ ನಂತರ ಮತ್ತೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ನಿರಂತರ ಭಜನಾ ಸಂಕೀರ್ತನೆ ಉತ್ಸವದ ಪ್ರಯುಕ್ತ ಬೆಳಿಗ್ಗೆ 9.00ರಿಂದ ರಾತ್ರಿ 8.00ರ ತನಕ ನಿರಂತರ ಭಜನಾ ಸಂಕೀರ್ತನೆ ಹಮ್ಮಿಕೊಳ್ಳಲಾಗಿದೆ. ವಿವಿಧ ಭಜನಾ ಮಂಡಳಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಜನೆ ನಡೆಸಿಕೊಡಲಿವೆ. ಬೆಳಿಗ್ಗೆ 9ರಿಂದ 10ರ ವರೆಗೆ ಗುರುರಾಘವೇಂದ್ರ ಭಜನಾ ಮಂಡಳಿ ಚಿಟ್ಟೆಮಾರು ಪುತ್ತಿಗೆ, 10ರಿಂದ 11ರ ವರೆಗೆ ಮಹಿಷಾಮರ್ದಿನಿ ಮಹಿಳಾ ಭಜನಾ ಮಂಡಳಿ ನೆಲ್ಲಿಗುಡ್ಡೆ, 11ರಿಂದ 12ರ ವರೆಗೆ ಆದಿಶಕ್ತಿ ಭಜನಾ ಮಂಡಳಿ ಮೂಡುಬಿದಿರೆ ಹಾಗೂ ಮಧ್ಯಾಹ್ನ 12ರಿಂದ 1ರ ವರೆಗೆ ರಾಮಚಂದ್ರ ಭಜನಾ ಮಂಡಳಿ ಕೆಂಪ್ಲಾಜೆ ಮೂಡುಬಿದಿರೆ ಭಜನೆ ಮಾಡಲಿವೆ. ಮಧ್ಯಾಹ್ನ 1ರಿಂದ 2ರ ವರೆಗೆ ಸೋಮನಾಥೇಶ್ವರ ಭಜನಾ ಮಂಡಳಿ ವರ್ಣಬೆಟ್ಟು, 2ರಿಂದ 3ರ ವರೆಗೆ ಗಜಾನನ ಭಜನಾ ಮಂಡಳಿ ಒಂಟಿಕಟ್ಟೆ, 3ರಿಂದ 4ರ ವರೆಗೆ ಬ್ರಹ್ಮಶ್ರೀ ಗುರುನಾರಾಯಣ ಮಹಿಳಾ ಭಜನಾ ಮಂಡಳಿ ಮೂಡುಬಿದಿರೆ ಹಾಗೂ ಸಂಜೆ 4ರಿಂದ 5ರ ವರೆಗೆ ಬ್ರಹ್ಮಶ್ರೀ ಗುರುನಾರಾಯಣ ಭಜನಾ ಮಂಡಳಿ ಪೂಪಾಡಿಕಲ್ಲು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಲಿವೆ. ಸಂಜೆ 5ರಿಂದ 6ರ ವರೆಗೆ ಭಕುತಿ ತಂಡ ಗೋಪಾಲಕೃಷ್ಣ ಭಜನಾ ಮಂಡಳಿ ಮೂಡುಬಿದಿರೆ, 6ರಿಂದ 7ರ ವರೆಗೆ ಆದಿಶಕ್ತಿ ಭಜನಾ ಮಂಡಳಿ ಪುತ್ತಿಗೆ ಪದವು, 7ರಿಂದ 7.30ರ ವರೆಗೆ ಶಿವಳ್ಳಿ ಜ್ಞಾನಶಕ್ತಿ ಮಹಿಳಾ ಭಜನಾ ಮಂಡಳಿ ಪುತ್ತಿಗೆ ಮತ್ತು ರಾತ್ರಿ 7.30ರಿಂದ 8.00ರ ವರೆಗೆ ಸೋಮನಾಥೇಶ್ವರ ಭಜನಾ ಮಂಡಳಿ ನೆಲ್ಲಿಗುಡ್ಡೆ ಪುತ್ತಿಗೆ ಭಜನೆ ನಡೆಸಿಕೊಡಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.