ಮೂಡುಬಿದಿರೆ: ಇರುವೈಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಪತ್ತನಾಜೆ ಸೇವೆಯ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಕಟೀಲು ಮೇಳದ ಕಲಾವಿದ, ಮಹಿಷಾಸುರ ಪಾತ್ರಧಾರಿ ಉಮೇಶ್ ಸಾಲ್ಯಾನ್ ಕುಪ್ಪೆಪದವು ಅವರನ್ನು ಸನ್ಮಾನಿಸಲಾಯಿತು. ಇರುವೈಲು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷೆ ಸುಜಾತ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಅಸ್ರಣ್ಣ ಆಶೀರ್ವಚನ ನೀಡಿದರು. ಮೇಳದ ಅಧ್ಯಕ್ಷ ಐ. ಕುಮಾರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವ್ಯವಸ್ಥಾಪನಾ ಸಮಿತಿಯಸದಸ್ಯರುಗಳು, ಮಾಜಿ ಅಧ್ಯಕ್ಷ ಭುಜಂಗ ಆರ್ ಶೆಟ್ಟಿ, ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಜಯರಾಮ ಬಂಗೇರಾ ಹಾಗೂ ಉಮೇಶ್ ಸಾಲ್ಯಾನ್ ಪತ್ನಿ ಶ್ಯಾಮಲ ಉಪಸ್ಥಿತರಿದ್ದರು. ಸುರೇಶ್ ಪ್ರಭು ನಡುಬಾಳಿಕೆ ಸನ್ಮಾನ ಪತ್ರ ವಾಚಿಸಿದರು. ನಾರಾಯಣ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.
ಇರುವೈಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಪತ್ತನಾಜೆ ಸೇವೆ: ಕಟೀಲು ಮೇಳದ ಮಹಿಷಾಸುರ ಪಾತ್ರಧಾರಿಗೆ ಉಮೇಶ್ ಸಾಲ್ಯಾನ್ ಕುಪ್ಪೆಪದವುಗೆ ಸನ್ಮಾನ
ಇರುವೈಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಪತ್ತನಾಜೆ ಸೇವೆ: ಕಟೀಲು ಮೇಳದ ಮಹಿಷಾಸುರ ಪಾತ್ರಧಾರಿಗೆ ಉಮೇಶ್ ಸಾಲ್ಯಾನ್ ಕುಪ್ಪೆಪದವುಗೆ ಸನ್ಮಾನ