ಮೂಡುಬಿದಿರೆ: ಭಾರತೀಯ ಸೇನೆಯ ಅಗ್ನಿವೀರ್ ಜಿಡಿ (ಜನರಲ್ ಡ್ಯೂಟಿ) ಹುದ್ದೆಗೆ ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಪಣಪಿಲ ಗ್ರಾಮದ ಯುವಕ ವಿರಾಜ್ ಪೂಜಾರಿ ಆಯ್ಕೆಯಾಗಿದ್ದಾರೆ. ಕಠಿಣ ಪರಿಶ್ರಮ ಮತ್ತು ದೇಶಸೇವೆಯ ಕನಸು ಹೊಂದಿದ್ದ ಇವರು ಭಾರತೀಯ ಸೇನೆಗೆ ಸೇರ್ಪಡೆಯಾಗುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

ಪಣಪಿಲ ಗ್ರಾಮದ ತಾರಿದಪಡ್ಪು ನಿವಾಸಿಯಾದ ವಿರಾಜ್ ಪೂಜಾರಿ ಅವರ ಸಾಧನೆಯ ಹಿಂದೆ ಹೆತ್ತವರ ಅಪಾರ ಶ್ರಮವಿದೆ. ಇವರ ತಂದೆ ವಿಶ್ವನಾಥ ಪೂಜಾರಿ ಮತ್ತು ತಾಯಿ ವಿಜಯ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡಿದ್ದು, ಮಗನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ವಿಶ್ವನಾಥ ಪೂಜಾರಿ ಮತ್ತು ವಿಜಯ ದಂಪತಿಯ ಮೂವರು ಗಂಡುಮಕ್ಕಳಲ್ಲಿ ವಿರಾಜ್ ಪೂಜಾರಿ ಎರಡನೇ ಮಗನಾಗಿದ್ದಾರೆ. ಗ್ರಾಮೀಣ ಭಾಗದ ಬಡ ಕುಟುಂಬದ ಹಿನ್ನೆಲೆಯಿಂದ ಬಂದು, ಸೈನ್ಯಕ್ಕೆ ಆಯ್ಕೆಯಾಗುವ ಮೂಲಕ ಇವರು ಇತರ ಗ್ರಾಮೀಣ ಯುವಕರಿಗೆ ಮಾದರಿಯಾಗಿದ್ದಾರೆ.