ಮೂಡುಬಿದಿರೆ: ವಿಶ್ವ ಪರಿಸರ ದಿನದ ಅಂಗವಾಗಿ ಮೂಡುಬಿದಿರೆ ಅರಣ್ಯ ಇಲಾಖೆಯ ವತಿಯಿಂದ ಮಾರ್ಪಾಡಿ ಗ್ರಾಮದ ದ. ಕ ಜಿಲ್ಲಾ ಪಂಚಾಯತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಂಟಿಕಟ್ಟೆಯಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.

ವಲಯಾರಣ್ಯಾಧಿಕಾರಿ ಕಿರಣ್ ಕುಮಾರ್ ಜಿ. ಕಾರ್ಯಕ್ರಮದಲ್ಲಿ ಮಾತನಾಡಿ , ಇಂದು ಪರಿಸರವು ನಾಶದ ಅಂಚಿನಲ್ಲಿದ್ದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಪರಿಸರಕ್ಕೆ ನಮ್ಮಿಂದ ಏನಾದರೂ ಕೊಡುಗೆಯನ್ನು ನೀಡಬೇಕೆಂದರೆ ಅದು ಗಿಡಗಳನ್ನು ನೆಡುವುದರಿಂದ ಮಾತ್ರ ಸಾಧ್ಯ. ಪರಿಸರದ ಬಗ್ಗೆ ಕಾಳಜಿ ಮೂಡಬೇಕೆಂದರೆ ಮಕ್ಕಳು ತಮ್ಮ ಹುಟ್ಟಿದ ದಿನದಂದು ಗಿಡಗಳನ್ನು ನೆಡುವ ಮೂಲಕ ಜನ್ಮದಿನವನ್ನು ಆಚರಿಸಬೇಕು ಎಂದು ಸಲಹೆ ನೀಡಿದರು.

ಉಪ ವಲಯಾರಣ್ಯಾಧಿಕಾರಿ ಗುರುಮೂರ್ತಿ, ಗಸ್ತು ಅರಣ್ಯ ಪಾಲಕರುಗಳಾದ ಶಂಕರ್ ಗೌಡ, ಭರತೇಶ್ ಸುವರ್ಣ, ಸ್ಮಿತಾ, ಅರಣ್ಯ ವೀಕ್ಷಕ ನಾರಾಯಣ, ವಾಹನ ಚಾಲಕ ಮಿಥುನ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್, ಮುಖ್ಯ ಶಿಕ್ಷಕಿ ಎಲ್ವೀರಾ ಪಿಂಟೋ , ಶಿಕ್ಷಕರು ಉಪಸ್ಥಿತರಿದ್ದರು.