ಮೂಡುಬಿದಿರೆ: ಅಗರಿ ಎಂಟರ್‌ಪ್ರೈಸಸ್ ‘ಅಗರಿ ಹಬ್ಬ ಹಬ್ಬಗಳ ಉತ್ಸವ’ದ ಅಂಗವಾಗಿ ನಡೆಯುತ್ತಿರುವ ‘ಪ್ರತಿ ದಿನ ಒಂದು ಬಹುಮಾನ, ನೂರು ದಿನ ನೂರು ಬಹುಮಾನ’ ಸರಣಿಯ 10ನೇ ಹಂತದ ಮೂರನೇ ಡ್ರಾ ಕಾರ್ಯಕ್ರಮ ಮಂಗಳೂರಿನ ಮೇರಿಹಿಲ್ ಶಾಖೆಯಲ್ಲಿ ನಡೆಯಿತು.

ನಿತಿನ್ ಎಲೆಕ್ಟ್ರಾನಿಕ್ಸ್‌ನ ನಿತಿನ್ ಎ. ಬಂಗೇರ, ರಂಜನಿ ಮಾರ್ಲ, ಚಂದ್ರಹಾಸ ಶೆಟ್ಟಿ ನಾರಳ, ಆರ್ಮಿ ಆಫೀಸರ್ ಸಂದೇಶ್, ಕಂಕನಾಡಿ ಠಾಣೆಯ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಜಯಾನಂದ್, ನಿರೂಪಕ ಮಧುರಾಜ್ ಗುರುಪುರ, ಸಂದೇಶ್ ನೀರುಮಾರ್ಗ, ರೆನಿಟಾ, ಉದ್ಯಮಿ ಶರೀಫ್ ನೂಯಿ, ಬಾಲ ನಟಿ ಪ್ರಾನ್ವಿ ಅಕ್ಷಯ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಅಗರಿ ಸಂಸ್ಥೆಯ ಮಾಲಕ ಅಗರಿ ರಾಘವೇಂದ್ರ ರಾವ್ ಅತಿಥಿಗಳನ್ನು ಗೌರವಿಸಿದರು. ಜಯಾನಂದ್ ಎಕ್ಕೂರು ಅವರನ್ನು ಸನ್ಮಾನಿಸಲಾಯಿತು.ಕಳೆದ ಬಾರಿಯ ಡ್ರಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಂಗಳೂರು ಶಾಖೆಯ ವ್ಯವಸ್ಥಾಪಕ ಸಂದೀಪ್ ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.