ಮೂಡುಬಿದಿರೆ: ಮಾಂಟ್ರಾಡಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಬ್ಯಾಗ್, ನೋಟ್ ಬುಕ್ ಹಾಗೂ ಇತರ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರುl, ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಚರ್ಮರೋಗ ತಜ್ಞರಾದ ಡಾ. ಯಶೋಧರ್ ಪ್ರತಿ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಈ ಕಲಿಕಾ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧನಂಜಯ ಆಳ್ವ ಮಾತನಾಡಿ, ಶಾಲಾ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಡಾ. ಯಶೋಧರ್ ನೀಡುತ್ತಿರುವ ನಿರಂತರ ಕೊಡುಗೆಯನ್ನು ಶ್ಲಾಘಿಸಿದರು.
ಡಾ. ಯಶೋಧರ್ ಅವರ ತಾಯಿ ರುಕ್ಮಿಣಿ, ಪತ್ನಿ ಯಶವಂತಿ, ಸಹೋದರ ಶಶಿಧರ್ ಎಂ., ಶಾಲಾ ಮುಖ್ಯಶಿಕ್ಷಕಿ ವಾಣಿಶ್ರೀ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಂಟ್ರಾಡಿ ಘಟಕದ ಅಧ್ಯಕ್ಷ ವಿದೇಶ್ ಕೋಟ್ಯಾನ್, ಶಾಲಾ ಶಿಕ್ಷಕವೃಂದ, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಾಸ್ತಾವಿಕ ಮಾತು ಶಿಕ್ಷಕಿ ಮೃದುಲ, ನಿರೂಪಣೆ ಶಿಕ್ಷಕರಾದ ವಿನಾಯಕ, ದಾನಿಗಳ ಪರಿಚಯ ಶಿಕ್ಷಕಿ ರೂಪ, ಧನ್ಯವಾದ ಅರ್ಚನಾ