ಮೂಡುಬಿದಿರೆ: ಕೆಸರುಗದ್ದೆ ಶ್ರೀರಾಮ ಮಂದಿರದಲ್ಲಿ ಅಧಿಕ ಪುರುಷೋತ್ತಮ ಮಾಸದ ಆಚರಣೆಯ ಅಂಗವಾಗಿ ಭಾನುವಾರ ವಿಶೇಷ ಹೂವಿನ ಪೂಜೆ ನಡೆಯಿತು. ಸೀತಾಪತಿ ಶ್ರೀರಾಮಚಂದ್ರ ದೇವರಿಗೆ ಭಜಕರಿಂದ ಸಮರ್ಪಿಸಲಾದ ಸುಮಾರು 40 ಅಟ್ಟೆ ಮಲ್ಲಿಗೆಯಿಂದ ಅಲಂಕಾರ ಮಾಡಲಾಗಿದ್ದು, ಗಮನ ಸೆಳೆಯಿತು. ಕಾರ್ಕಳದ ಜಿ.ಎಸ್.ಬಿ. ಬಾಲಕರ ಭಜನ್ ಸಂಧ್ಯಾ, ಮಂಗಳೂರಿನ ಮೇಘಾ ಪೈ ಬಳಗದ ಭಜನಾ ಸಂಗಮ ಹಾಗೂ ಕೊಂಚಾಡಿಯ ಮುರಳೀಧರ ಕಾಮತ್ ಬಳಗದ ಭಜನಾ ಕಾರ್ಯಕ್ರಮಗಳು ನಡೆದವು. ವಿವಿಧ ಭಜನಾ ತಂಡಗಳ ಭಜನೆ ಪ್ರಸ್ತುತಪಡಿಸಿದರು. ಧಾರ್ಮಿಕ ಕಾರ್ಯಕ್ರಮಗಳು ಪದ್ಮನಾಭ ಭಟ್ ಹಾಗೂ ಸುಧೇಶ್ ಭಟ್ ಅವರ ನೇತೃತ್ವದಲ್ಲಿ ನೆರವೇರಿದವು. ಸಮಾಜದ ಅಧ್ಯಕ್ಷ ಕೆ. ವಿಶ್ವನಾಥ ಮಾಧವ ಪ್ರಭು, ಹಿರಿಯರಾದ ಎಂ. ದಯಾನಂದ ಪೈ ಪಡುಮಾರ್ನಾಡು ಸೇರಿದಂತೆ ಅಪಾರ ಸಂಖ್ಯೆಯ ಭಜಕರು ಉಪಸ್ಥಿತರಿದ್ದರು.
ಎಸ್ಸಿ-ಎಸ್ಟಿ ಕುಂದುಕೊರತೆ ಸಭೆ: ಅಪಪ್ರಚಾರಕ್ಕೆ ಜೈ ಭೀಮ್ ಯುವಸೇನೆ ಸ್ಪಷ್ಟನೆ: ಅಧಿಕಾರಿಗಳಿಗೆ ಗೌರವ ನೀಡಿ ಸಮಸ್ಯೆ ಮಂಡಿಸಿ- ವರ್ತೂರ್ ಮಂಜುನಾಥ್
ಮೂಡುಬಿದಿರೆ: ತಹಶೀಲ್ದಾರ್ ನೇತೃತ್ವದಲ್ಲಿ ನಡೆದ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆಗೆ ಸಂಬಂಧಿಸಿ ಕೆಲವರು ಮಾಡಿರುವ ಅಪಪ್ರಚಾರದ ಬಗ್ಗೆ ನಿಖರ ಮಾಹಿತಿ ನೀಡುವ ಉದ್ದೇಶದಿಂದ ಸುವರ್ಣ ಕರ್ನಾಟಕ ರಾಜ್ಯ ಸಮಿತಿ ಜೈ ಭೀಮ್ ಯುವಸೇನೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಸ್ಪಷ್ಟನೆ ನೀಡಲಾಯಿತು.
ಶಿರ್ತಾಡಿಯಲ್ಲಿ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ
ಮೂಡುಬಿದಿರೆ: ಶಿರ್ತಾಡಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘ ಮತ್ತು ನಾರಾಯಣ ಗುರು ಮಹಿಳಾ ಘಟಕದ ಆಶ್ರಯದಲ್ಲಿ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆಯು ಆ.21ರಂದು ಶುಕ್ರವಾರ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು.
ಕೊಡ್ಯಡ್ಕ ಮಿತ್ತಬೈಲ್ ಬಳಿ ಪಿಕ್ಅಪ್ ವಾಹನ ಪಲ್ಟಿ
ಮೂಡುಬಿದಿರೆ: ಕೊಡ್ಯಡ್ಕ ಮಿತ್ತಬೈಲ್ ಬಳಿ ಜನರೇಟರ್ ಸಾಗಿಸುತ್ತಿದ್ದ ಪಿಕ್ಅಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಮಾರ್ಗಮಧ್ಯದಲ್ಲೇ ಪಲ್ಟಿಯಾದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಯಿತು. ಪಾಲಡ್ಕ ಕಡೆಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಪಿಕ್ಅಪ್ ವಾಹನವು ಕೊಡ್ಯಡ್ಕ ಮಿತ್ತಬೈಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಾರ್ಗಮಧ್ಯದಲ್ಲೇ ಪಲ್ಟಿಯಾಗಿ ಬಿದ್ದಿದೆ. ವಾಹನದಲ್ಲಿ ಜನರೇಟರ್ ಸಾಗಿಸಲಾಗುತ್ತಿತ್ತು.