ಮೂಡುಬಿದಿರೆ: ರಾಜ್ಯ ಸಿಇಟಿ ಫಲಿತಾಂಶದಲ್ಲಿ ಇಲ್ಲಿನ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟದ ವಿವಿಧ ವೃತ್ತಿಪರ ಕೋರ್ಸ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಮುಂಚೂಣಿಯ ಸ್ಥಾನಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿನಿ ತನ್ಮಯಿ ಕೋಟಿ ಕೃಷಿ ವಿಭಾಗದಲ್ಲಿ 18 ನೇ ರ‍್ಯಾಂಕ್ ಹಾಗೂ ನ್ಯಾಚುರೋಪತಿ ಆಂಡ್ ಯೋಗ ವಿಭಾಗದಲ್ಲಿ 24 ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ತನುಶ್ರೀ ಎಚ್ ಆರ್ ಡಿ ಫಾರ್ಮಾ ವಿಭಾಗದಲ್ಲಿ 23 ನೇ ರ‍್ಯಾಂಕ್ ಗಳಿಸಿದ್ದಾರೆ. ಧ್ರುವಂತ್ ಕೆ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ವಿಭಾಗದಲ್ಲಿ 41 ನೇ ರ‍್ಯಾಂಕ್ ಪಡೆದರೆ, ನಿಖಿಲ್ ಎಸ್ ಎಸ್ ಕೃಷಿ ವಿಭಾಗದಲ್ಲಿ 41 ಹಾಗೂ ಫುಡ್ ಸೈನ್ಸ್ ವಿಭಾಗದಲ್ಲಿ 41 ನೇ ರ‍್ಯಾಂಕ್ ಗಳಿಸಿದ್ದಾರೆ. ನಿಶ್ಚಲ್ ಪಶುವೈದ್ಯಕೀಯ ವಿಭಾಗದಲ್ಲಿ 58 ನೇ ರ‍್ಯಾಂಕ್ ಪಡೆದಿದ್ದಾರೆ. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್, ಬಿಎಸ್ಸಿ ಕೃಷಿ ಹಾಗೂ ನರ್ಸಿಂಗ್ ವಿಭಾಗಗಳ ಪ್ರವೇಶಾತಿಗೆ ನೂರರ ಒಳಗಿನ ರ‍್ಯಾಂಕ್‌ಗಳನ್ನು ಪಡೆದು ಅರ್ಹತೆ ಗಳಿಸಿದ್ದಾರೆ ರಾಜ್ಯಮಟ್ಟದಲ್ಲಿ ಉನ್ನತ ಸಾಧನೆಗೈದು ಕಾಲೇಜಿನ ಕೀರ್ತಿ ಹೆಚ್ಚಿಸಿದ ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪುಷ್ಪರಾಜ್, ಸಂಯೋಜಕರುಗಳಾದ ಡಾ. ಪ್ರಶಾಂತ್ ಹೆಗಡೆ, ರಂಜಿತ್ ಜೈನ್ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.
ಕೆಸಿಇಟಿ: ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಟಾಪ್ 100 ರ‍್ಯಾಂಕ್
ಕೆಸಿಇಟಿ: ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಟಾಪ್ 100 ರ‍್ಯಾಂಕ್