ಮೂಡುಬಿದಿರೆ: ಕಲ್ಲಮುಂಡ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಸಡಗರದಿಂದ ಜರುಗಿತು. ಶಾಲೆಯನ್ನು ತಳಿರು ತೋರಣಗಳಿಂದ ಶೃಂಗಾರಗೊಳಿಸಿ, ದೀಪ ಬೆಳಗಿಸುವ ಮೂಲಕ ಶಾಲಾ ಪರಿಸರವನ್ನು ಸಜ್ಜುಗೊಳಿಸಲಾಗಿತ್ತು. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಆರತಿ ಎತ್ತಿ, ಹೂಮಳೆ ಗರೆಯುವ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಎಸ್‌ಡಿಎಮ್‌ಸಿ ಅಧ್ಯಕ್ಷ ವಸಂತ ನಾಯ್ಕ ಮತ್ತು ಮುಖ್ಯ ಶಿಕ್ಷಕಿ ಹೇಮಲತಾ ಎಲ್ ಜಿ ಅವರು ಮಕ್ಕಳಿಗೆ ಬೆಲೂನ್ ಹಾಗೂ ಹೂಗುಚ್ಚಗಳನ್ನು ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಶಾಲಾ ಬ್ಯಾನರ್ ಮತ್ತು ಬ್ಯಾಂಡ್ ಸೆಟ್ ವಾದನದೊಂದಿಗೆ ಪ್ರಮುಖ ಬೀದಿಗಳಲ್ಲಿ 'ವಿದ್ಯಾರ್ಥಿ ಜಾಥಾ' ನಡೆಸಲಾಯಿತು. ಶಿಕ್ಷಕಿಯರಾದ ಶೈಲಶ್ರೀ, ಅನಿತಾ ಅಲ್ಬುಕರ್ಕ್, ಸರಿತಾ, ಪದ್ಮಾವತಿ, ಯಶೋಧ, ರೇಶ್ಮಾ ಮತ್ತು ಚಂದ್ರಿಕಾ ಉಪಸ್ಥಿತರಿದ್ದರು. ಎಸ್‌ಡಿಎಮ್‌ಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.