ಮೂಡುಬಿದಿರೆ: ದಾಖಲೆಯ ಸುದೀರ್ಘಾವಧಿಯ ಜನಪ್ರಿಯ ಆಡಳಿತ ನಡೆಸುತ್ತಿರುವ ಚುನಾಯಿತ ಪ್ರಧಾನಿ ನರೇಂದ್ರ ಮೋದಿ ಅವರ ದೀರ್ಘಾಯುಷ್ಯಕ್ಕಾಗಿ ಮತ್ತು 2047ರ ವಿಕಸಿತ ಭಾರತದ ಸಂಕಲ್ಪ ಸಾಧನೆಗಾಗಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.

ಮೂಲ್ಕಿ ಮೂಡುಬಿದಿರೆ ಮಂಡಲ ಭಾರತೀಯ ಜನತಾ ಪಾರ್ಟಿ ವತಿಯಿಂದ ಪೂಜೆ ಸಲ್ಲಿಸಲಾಯಿತು.ದೇವಸ್ಥಾನದ ಅರ್ಚಕ ವೆಂಕಟರಮಣ ಆಸ್ರಣ್ಣ ಶ್ರೀದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀದೇವಿಯು ಆಯುರಾರೋಗ್ಯ ಕರುಣಿಸಲಿ ಮತ್ತು ಅವರ ನೇತೃತ್ವದಲ್ಲಿ ಭಾರತವು ಅಭಿವೃದ್ಧಿ ಹೊಂದಿದ ವಿಕಸಿತ ಭಾರತವಾಗಲಿ ಎಂದು ಪ್ರಾರ್ಥಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಮುಖಂಡರಾದ ಸುನಿಲ್ ಆಳ್ವ, ಬೋಳ ವಿಶ್ವನಾಥ ಕಾಮತ್, ಎಂ ದಯಾನಂದ ಪೈ ಪಡುಮಾರ್ನಾಡು, ಎಂ ಬಾಹುಬಲಿ ಪ್ರಸಾದ್, ಶಾಂತಿಪ್ರಸಾದ್ ಹೆಗ್ಡೆ, ಭುವನಾಭಿರಾಮ ಉಡುಪ, ನಿರಂಜನ ರಾವ್, ಎಂ ರಾಘವೇಂದ್ರ ಭಂಡಾರ್ಕರ್, ಗೀತಾ, ಬೇಬಿ, ಕಾರ್ಯಕರ್ತರು ಉಪಸ್ಥಿತರಿದ್ದರು.