ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್ ಹಾಗೂ ಅಬ್ಬಕ್ಕ ಬ್ರಿಗೇಡ್ ಮಹಿಳಾ ಘಟಕ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ.

ಅಮರ್ ಕೋಟೆ ಸಂಘಟನೆಯ ಸ್ಥಾಪಕಧ್ಯಕ್ಷರಾಗಿದ್ದು, ದಿನೇಶ್ ನಾಯ್ಕ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಗೌರವ ಮಾರ್ಗದರ್ಶಕರಾಗಿ ರಾಜೇಂದ್ರ ಜಿ, ಗುರುಪ್ರಸಾದ್ ಹೊಳ್ಳ, ಪ್ರವೀಣ್ ಜೈನ್ ಬೆಳುವಾಯಿ ಹಾಗೂ ಶಾಮ್ ಪ್ರಸಾದ್ ಸಜಂಕಿಲ ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ನಾರಾಯಣ ಪಡುಮಲೆ ಹಾಗೂ ರಾಜೇಶ್ ಕೋಟಿಗಾರ್ ಕಾರ್ಯನಿರ್ವಹಿಸಲಿದ್ದಾರೆ. ಸಂಚಾಲಕರಾಗಿ ರಂಜಿತ್ ಶೆಟ್ಟಿ, ಸಹ ಸಂಚಾಲಕರಾಗಿ ವಿದ್ಯಾನಂದ ಶೆಟ್ಟಿ, ಅಕ್ಷಯ್ ಕುಮಾರ್ ಆಯ್ಕೆಯಾಗಿದ್ದಾರೆ ಕಾರ್ಯದರ್ಶಿಗಳಾಗಿ ಸಂದೀಪ್ ಕೆಲ್ಲಪುತ್ತಿಗೆ, ಶಮಿತ್ ರಾವ್, ಜೊತೆ ಕಾರ್ಯದರ್ಶಿಗಳಾಗಿ ಗಣೇಶ್ ಪೈ ಮತ್ತು ಸುರೇಶ್ ಕಾರ್ಯಾಗುಂಡಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಸಂಸ್ಥೆಯ ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ಕ್ರೀಡಾ ಚಟುವಟಿಕೆಗಳ ನಿರ್ವಹಣೆಗಾಗಿ ಪ್ರತ್ಯೇಕ ಸಂಯೋಜಕರನ್ನು ನೇಮಕ ಮಾಡಲಾಗಿದೆ. ರಕ್ತ ನಿಧಿ ಸಂಯೋಜಕರಾಗಿ ಮನು ಒಂಟಿಕಟ್ಟೆ, ಭಕುತಿ ಭಜನೆ ವಿಭಾಗಕ್ಕೆ ಪ್ರಥಮ್ ಎಸ್.ಬನ್ನಡ್ಕ, ಅಭಿಯಾನ ವಿಭಾಗಕ್ಕೆ ರಾಜೇಶ್ ಕೆಲ್ಲಪುತ್ತಿಗೆ, ಮಾಧ್ಯಮ ವಿಭಾಗಕ್ಕೆ ಸುದರ್ಶನ್ ಬಂಗೇರ, ಸಾಂಸ್ಕೃತಿಕ ವಿಭಾಗಕ್ಕೆ ಅರುಣ್ ಕುಮಾರ್ ಹಾಗೂ ಕ್ರೀಡಾ ವಿಭಾಗಕ್ಕೆ ಭಾಸ್ಕರ್ ನೇಮಕಗೊಂಡಿದ್ದಾರೆ. ಸಹ ಸಂಯೋಜಕರಾಗಿ ರಂಜು ಮಿಜಾರ್, ಮಾಧವ್, ಅಭಿಲಾಷ್, ಪ್ರತೀಶ್, ವೈಭವ್ ಹಾಗೂ ಸುಮಂತ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಗೌರವ ಸಲಹೆಗಾರರಾಗಿ ಆಶ್ರಿತ್ ಮತ್ತು ಯೋಗೀಶ್ ಕಾರ್ಯನಿರ್ವಹಿಸಲಿದ್ದಾರೆ.

ಅಬ್ಬಕ್ಕ ಬ್ರಿಗೇಡ್ ಮಹಿಳಾ ಘಟಕದ ಮಹಿಳಾ ಘಟಕದ ಸಂಚಾಲಕಿಯಾಗಿ ಸುನೀತಾ ಹಾಗೂ ಕಾರ್ಯದರ್ಶಿಯಾಗಿ ರಮ್ಯಾ ದಿನೇಶ್ ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಸಂಚಾಲಕಿಯಾಗಿ ಸಹನಾ ಸುಧೀರ್, ಸಹ ಸಂಚಾಲಕಿಯಾಗಿ ವಿದ್ಯಾ, ಸಹ ಕಾರ್ಯದರ್ಶಿಗಳಾಗಿ ಸೌಮ್ಯ, ಶ್ರೇಯಾ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಗೌರವ ಸಲಹೆಗಾರರಾಗಿ ಸ್ಮಿತಾ ಹೊಳ್ಳ ಮತ್ತು ಪ್ರೇಮಾ ರಾವ್ ನೇಮಕಗೊಂಡಿದ್ದು, ಲೆಕ್ಕ ಪರಿಶೋಧಕರಾಗಿ ಸುಕನ್ಯಾ ಕಾರ್ಯನಿರ್ವಹಿಸಲಿದ್ದಾರೆ.

ಮಹಿಳಾ ಘಟಕದ ವಿವಿಧ ವಿಭಾಗಗಳ ಪ್ರಮುಖರಾಗಿ ಸಂಸ್ಕಾರ ಜಾಗೃತಿ ವಿಭಾಗಕ್ಕೆ ಲಕ್ಷ್ಮಿ ಭಟ್, ಸಾಂಸ್ಕೃತಿಕ ವಿಭಾಗಕ್ಕೆ ಸೌಮ್ಯ, ರಾಧಿಕಾ, ಕ್ರೀಡಾ ವಿಭಾಗಕ್ಕೆ ಶಾಂತಾ ಮತ್ತು ಪ್ರಿಯಾಂಕ, ವಿದ್ಯಾರ್ಥಿ ವಿಭಾಗಕ್ಕೆ ಅನಿಶಾ, ಗೌತಮಿ, ಸೇವಾ ವಿಭಾಗಕ್ಕೆ ಪೂರ್ಣಿಮಾ ಕಾಮತ್, ರೇವತಿ ಹಾಗೂ ಅಭಿಯಾನ ವಿಭಾಗಕ್ಕೆ ರಾಧಾ ಸುಂದರ್, ವಾರಿಜ ಅವರನ್ನು ಆಯ್ಕೆ ಮಾಡಲಾಗಿದೆ.