ಮೂಡುಬಿದಿರೆ: ವೈದಿಕ ಸಂರಕ್ಷಣಾ ಸಭಾದ ವತಿಯಿಂದ ಲೋಕ ಕಲ್ಯಾಣಾರ್ಥ ಶ್ರೀ ಲಕ್ಷ್ಮೀ ಹೃದಯ ಪಾರಾಯಣ ಪೂರಕ ಹೋಮವು ಶ್ರೀಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಶುಕ್ರವಾರ ನಡೆಯಿತು.

ಸಭಾದ ಅಧ್ಯಕ್ಷ ರಾಜೇಶ್ ಪುರೋಹಿತ್ ಮಂಗಲಪದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್. ಕೇಶವ ತಂತ್ರಿ ಆಚಾರ್ಯತ್ವ ವಹಿಸಿ ಹೋಮದ ವಿಧಿವಿಧಾನಗಳನ್ನು ನೆರವೇರಿಸಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ 30ಕ್ಕೂ ಅಧಿಕ ಸದಸ್ಯ ವೈದಿಕರು ಪಾಲ್ಗೊಂಡು ವಿಶೇಷ ಪೂಜಾ ಕಾರ್ಯಗಳಲ್ಲಿ ಭಾಗವಹಿಸಿದರು.

ಸಭಾದ ಕಾರ್ಯದರ್ಶಿ ಪ್ರವೀಣ ಪುರೋಹಿತ್ ಬೆಳುವಾಯಿ, ಕೋಶಾಧಿಕಾರಿ ನಾಗೇಶ ಪುರೋಹಿತ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಕೆ. ಬಾಲಕೃಷ್ಣ ಆಚಾರ್ಯ ಉಳಿಯ, ಮೊಕ್ತೇಸರರಾದ ಶಿವರಾಮ ಆಚಾರ್ಯ ಉಳಿಯ ಮತ್ತು ಯೋಗೀಶ ಆಚಾರ್ಯ ಸೇರಿದಂತೆ ವಿವಿಧ ಸಮಿತಿಗಳ ಪ್ರಮುಖರು ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.