ಮಳಲಿ: ಪುರೋಹಿತ ದಿವಂಗತ ನಾಭಿರಾಜ ಇಂದ್ರರ ಪುತ್ರ ಉದಯ ಕುಮಾರ್ ಮಳಲಿ ಶನಿವಾರ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಕುಮಟಾ ,ಗೋಕರ್ಣದಲ್ಲಿ ಉಪತಹಸೀಲ್ದಾರರಾಗಿ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು, ಕರಾವಳಿ ಜೈನ್ ಮಿಲನ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ನಿವೃತ್ತಿಯ ನಂತರ ಸ್ವಂತ ಊರಾದ ಮಳಲಿಯಲ್ಲಿ ನೆಲೆಸಿದ್ದರು. ಪತ್ನಿ , ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.