ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ ಅಮನಬೆಟ್ಟು, ಪಡುಮಾರ್ನಾಡ್ ಇದರ 96ನೇ ಸೇವಾ ಯೋಜನೆಯ ಅಂಗವಾಗಿ ಜೂನ್-ಜುಲೈ ತಿಂಗಳ ಕಾರ್ಯಕ್ರಮದಲ್ಲಿ ನಾಲ್ಕು ಶಾಲೆಗಳ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್, ಕೊಡೆ, ಸಿಹಿ ತಿಂಡಿ ಹಾಗೂ ಶಾಲೆಗೆ ಮಿಕ್ಸರ್ ಗ್ರೈಂಡರ್ ವಿತರಿಸಲಾಯಿತು. ಸುಮಾರು 40,000 ರೂಪಾಯಿ ವೆಚ್ಚದಲ್ಲಿ ಈ ಧನಸಹಾಯ ಮತ್ತು ಪರಿಕರಗಳನ್ನು ಹಸ್ತಾಂತರಿಸಲಾಗಿದೆ.

ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಮನಬೆಟ್ಟು ಶಾಲೆಗೆ ಕೊಡೆ ಹಾಗೂ ಅಂಗನವಾಡಿ ಮಕ್ಕಳಿಗೆ ಕೊಡೆ ಮತ್ತು ಟ್ರ್ಯಾಕ್ ಸೂಟ್, ಸಿಹಿ ತಿಂಡಿ ನೀಡಲಾಯಿತು. ಬನ್ನಡ್ಕ ಸರ್ಕಾರಿ ಪ್ರಾಥಮಿಕ ಶಾಲೆಗೆ ಟ್ರ್ಯಾಕ್ ಸೂಟ್ ಮತ್ತು ಸಿಹಿ ತಿಂಡಿ, ಕೆಲ್ಲಪುತ್ತಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಟ್ರ್ಯಾಕ್ ಸೂಟ್ ಮತ್ತು ಸಿಹಿ ತಿಂಡಿ ಹಾಗೂ ತಂಡ್ರಕೆರೆ ಹಿರಿಯ ಪ್ರಾಥಮಿಕ ಶಾಲೆಗೆ ಮಿಕ್ಸರ್ ಗ್ರೈಂಡರ್ ಮತ್ತು ಸಿಹಿ ತಿಂಡಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಸಾಯಿ ಮಾರ್ನಾಡ್ ಸೇವಾ ಸಂಘದ ಅಧ್ಯಕ್ಷ ಯತೀಶ್ ಅಂಚನ್, ಕೋಶಾಧಿಕಾರಿ ಪ್ರಜ್ವಲ್ ಪೂಜಾರಿ, ಉಪಾಧ್ಯಕ್ಷ ರೋಹಿತ್ ಅಂಚನ್, ಮಹಿಳಾ ಘಟಕದ ಜವಾಬ್ದಾರಿ ನೋಡುವ ಶಶಿಕಲಾ ಗಿರೀಶ್, ಮುಖಂಡರಾದ ದಯಾನಂದ ಹೆಗ್ಡೆ, ಸಂತೋಷ್ ಕೋಟ್ಯಾನ್ ಹವಾಲ್ದರಬೆಟ್ಟು, ಸುರೇಂದ್ರ ಪೂಜಾರಿ ಅಡ್ಕರೆ, ಸಂತೋಷ್ ಮೊಡಂದೆಲ್, ಉಷಾ ಕಿರಣ್, ಶಿಕ್ಷಕಿ ಶಾಹಿನ್, ಸುಧಾಕರ್ ಆಚಾರ್ಯ ಬನ್ನಡ್ಕ, ಸತೀಶ್ ಬಂಗೇರ, ಅಮಿತಾ ನಾಗೇಶ್, ಸುಮಿತ್ರ ವಿಶ್ವನಾಥ್ ಬಂಗೇರಡಿ, ಅರುಣ್ ಪೂಜಾರಿ ಅಲಿಮಾರ್ ಉಪಸ್ಥಿತರಿದ್ದರು. ಶಾಲೆಯ ಟ್ರಸ್ಟಿಗಳು, ಪ್ರಧಾನ ಪೋಷಕರು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.