ಮೂಡುಬಿದಿರೆ: ಮಯೂರಿ ಸಿಲ್ಕ್ಸ್, ಮೂಡುಬಿದಿರೆ ವತಿಯಿಂದ ದ.ಕ.ಜಿ.ಪಂ.ಸ.ಹಿ.ಪ್ರಾ. ಶಾಲೆ, ಬೆಳುವಾಯಿ ಚರ್ಚ್ ಸಮೀಪದ ವಿದ್ಯಾರ್ಥಿಗಳಿಗೆ ₹7,000 ಮೌಲ್ಯದ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಹಳೆ ವಿದ್ಯಾರ್ಥಿ ಸುಧೀರ್ ಅವರು ₹25,000 ಮೌಲ್ಯದ ಛತ್ರಿಗಳನ್ನು ಕೊಡುಗೆಯಾಗಿ ನೀಡಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಗಣಪತಿ ಪೈ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಯೂರಿ ಸಿಲ್ಕ್ಸ್‌ನ ಮಾಲಕಿ ಪದ್ಮಲತಾ ಮಾತನಾಡಿ, ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವನ್ನು ಪೋಷಕರು ಮನೆಯಲ್ಲಿ ಕಲ್ಪಿಸಬೇಕು ಹಾಗೂ ನೀಡಲಾದ ಪುಸ್ತಕಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ವಿದ್ಯಾ, ನಿವೃತ್ತ ಮುಖ್ಯೋಪಾಧ್ಯಾಯ ವೆಂಕಟೇಶ್ ಎನ್., ಮಯೂರಿ ಸಿಲ್ಕ್ಸ್ ಸಿಬ್ಬಂದಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಸಹಶಿಕ್ಷಕಿ ವಿನಯ, ಗೌರವ ಶಿಕ್ಷಕಿಯರಾದ ಪ್ರಜ್ಞಾ, ಜೆನಿಟಾ ಆಸ್ಮಾ ಹಾಗೂ ಪೋಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸುರೇಂದ್ರ ಪೂಜಾರಿ ಸ್ವಾಗತಿಸಿದರು. ಶ್ರುತಿ ಕಾರ್ಯಕ್ರಮ ನಿರೂಪಿಸಿದರು. ಶೋಭಾ ವಂದಿಸಿದರು.