ಮೂಡುಬಿದಿರೆ: ಹಂಸಶ್ರೀ ಅವರು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಸ್ಕೂಲ್ ಆಫ್ ಸಿವಿಲ್ ಅಂಡ್ ಕೆಮಿಕಲ್ ಇಂಜಿನಿರಿಂಗ್ ವಿಭಾಗದ ಡಾ. ಪೂರ್ಣಚಂದ್ರ ಪಂಡಿತ್ ಅವರ ಮಾರ್ಗದರ್ಶನದಲ್ಲಿ 'ಮೆಕ್ಯಾನಿಕಲ್ ಅಂಡ್ ಡ್ಯೂರಬಿಲಿಟಿ ಪರ್ಫಾರ್ಮನ್ಸ್ ಆಫ್ ವನ್-ಪಾರ್ಟ್ ಆಲ್ಕಲಿ-ಆ್ಯಕ್ಟಿವೇಟೆಡ್ ಕಾಂಕ್ರೀಟ್ ಇನ್‌ಕಾರ್ಪೊರೇಟಿಂಗ್ ಕಾಂಕ್ರೀಟ್ ವಾಶ್ ವಾಟರ್'( ಕಾಂಕ್ರೀಟ್ ತೊಳೆಯುವ ನೀರನ್ನು ಬಳಸಿಕೊಂಡು ತಯಾರಿಸಲಾದ ಒನ್-ಪಾರ್ಟ್ ಆಲ್ಕಲಿ-ಸಕ್ರಿಯ ಕಾಂಕ್ರೀಟ್‌ನ ಯಾಂತ್ರಿಕ ಕಾರ್ಯಕ್ಷಮತೆ ಮತ್ತು ಬಾಳಿಕೆ ಸಾಮರ್ಥ್ಯದ ಅಧ್ಯಯನ) ವಿಷಯದ ಕುರಿತು ಸಂಶೋಧನೆ ನಡೆಸಿ ಪ್ರಬಂಧ ಮಂಡಿಸಿದ್ದಾರೆ.

ಹಂಸಶ್ರೀ ಅವರು ಮೂಡುಬಿದಿರೆಯ ಬ್ಯಾಂಕ್ ನಿವೃತ್ತ ಉದ್ಯೋಗಿ ಶಾಂತಿರಾಜ್ ಕೆ. ಹಾಗೂ ನಿವೃತ್ತ ಶಿಕ್ಷಕಿ ಶೋಭಾ ಕೆ. ಅವರ ಪುತ್ರಿ.