ಮೂಡುಬಿದಿರೆ: ಭಾರತೀಯ ಲೆಕ್ಕಪತ್ರ ಪರಿಶೋಧಕರ ಸಂಸ್ಥೆ (ICAI) ವತಿಯಿಂದ ಮೇ ತಿಂಗಳಲ್ಲಿ ನಡೆಸಲಾದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಮೂಡುಬಿದಿರೆಯ ಮಿತ್ತಬೈಲಿನ ನಿತೀಶ್ ಕಾಮತ್ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ.

ನಿತೀಶ್ ಕಾಮತ್ ಅವರು ನಿತ್ಯಾನಂದ ಕಾಮತ್ ಹಾಗೂ ನಂದಿತಾ (ಪ್ರತಿಮಾ) ಕಾಮತ್ ದಂಪತಿಯ ಪುತ್ರ. ಸಿ.ಎ. ಫೌಂಡೇಶನ್ ಹಂತದ ತರಬೇತಿಯನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪೂರ್ಣಗೊಳಿಸಿದ್ದು, ಬಳಿಕ ಸಿ.ಎ. ಇಂಟರ್‌ಮೀಡಿಯೇಟ್ ಹಂತದ ತರಬೇತಿಯನ್ನು ಮಂಗಳೂರಿನ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಪಡೆದಿದ್ದಾರೆ.

ಅನಂತರ ಬೆಂಗಳೂರಿನ ಮಲ್ಲೇಶ್ವರಂನ ವಿಷ್ಣು ದಯಾ & ಕೋ. ಎಲ್‌ಎಲ್‌ಪಿ ಸಂಸ್ಥೆಯಲ್ಲಿ ಸಿ.ಎ. ಆರ್ಟಿಕಲ್‌ಶಿಪ್ ತರಬೇತಿ ಪಡೆದ ನಿತೀಶ್ ಕಾಮತ್, ಇದೀಗ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಶೈಕ್ಷಣಿಕ ಸಾಧನೆ ದಾಖಲಿಸಿದ್ದಾರೆ.