ಮೂಡುಬಿದಿರೆ: ಗೌರಿಕೆರೆ ರಾಮಪುರ ರಾಮ ಮಂದಿರದಲ್ಲಿ ದೃಢ ಸಂಪ್ರೋಕ್ಷಣಾ ಕಾರ್ಯಕ್ರಮ ಜೂನ್ 25 ಮತ್ತು ಜೂನ್ 26 ರಂದು ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮವು ಎಡಪದವು ಮುರಳಿಧರ ತಂತ್ರಿ ನೇತೃತ್ವದಲ್ಲಿ ಜರುಗಲಿದೆ.
ರಾಮ ಮಂದಿರವು ದೇವಾಡಿಗ ಸುಧಾರಕ ಸಂಘ ಮೂಡುಬಿದಿರೆ ಇದರ ಆಡಳಿತಕ್ಕೊಳಪಟ್ಟಿದ್ದು, ಎರಡು ದಿನಗಳ ಕಾಲ ವಿವಿಧ ವೈದಿಕ ವಿಧಿವಿಧಾನಗಳು ಜರುಗಲಿವೆ. ಜೂನ್ 25ರ ಗುರುವಾರ ಸಂಜೆ 6 ಗಂಟೆಯಿಂದ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನೆ, ಸಪ್ತ ಶುದ್ಧಿ, ಸುದರ್ಶನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಾಕಾರ ಬಲಿ ಹಾಗೂ ಮಹಾಪೂಜೆ ನಡೆಯಲಿದ್ದು, ಬಳಿಕ ಅನ್ನದಾನ ಆಯೋಜಿಸಲಾಗಿದೆ. ಜೂನ್ 26ರ ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ ಗಣಯಾಗ, ಪ್ರಾಯಶ್ಚಿತ್ತ ಹೋಮ, ತತ್ವ ಹೋಮ, 108 ಕಲಶ ಸಹಿತ ಕಲಾಶಾಭಿಷೇಕ ಮತ್ತು ಮಹಾಪೂಜೆ ನೆರವೇರಲಿದ್ದು, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರುಗಲಿದೆ.
ಧಾರ್ಮಿಕ ವಿಧಿವಿಧಾನಗಳನ್ನು ಕ್ಷೇತ್ರದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ ಅಲಂಗಾರು ಮೂಡುಬಿದಿರೆ ನೆರವೇರಿಸಲಿದ್ದಾರೆ. ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ದೇವಾಡಿಗ ಸುಧಾರಕ ಸಂಘ ಮೂಡುಬಿದಿರೆ ಅಧ್ಯಕ್ಷರು ಮತ್ತು ಸದಸ್ಯರು, ದೇವಾಡಿಗ ಮಹಿಳಾ ವೇದಿಕೆ ಮತ್ತು ದೇವಾಡಿಗ ಯುವ ವೇದಿಕೆ ಅಧ್ಯಕ್ಷರು ಮತ್ತು ಸದಸ್ಯರು ವಿನಂತಿಸಿದ್ದಾರೆ.