ಮೂಡುಬಿದಿರೆ: ಬೆಳುವಾಯಿ ಕೆಸರುಗದ್ದೆಯಲ್ಲಿರುವ ಸ್ಪೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಹಾಗೂ ತರಬೇತಿ ಕೇಂದ್ರದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯೋಗಾಭ್ಯಾಸ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಿತು.

ಪತಂಜಲಿ ಯೋಗ ಸಮಿತಿ ಎಸ್.ವಿ.ಟಿ. ಮೂಡುಬಿದಿರೆ ಘಟಕದ ಯೋಗ ಶಿಕ್ಷಕರಾದ ಶರತ್ ಕುಮಾರ್, ರಾಜೇಶ್ ಶೆಟ್ಟಿಗಾರ್, ಪ್ರಾಣ ಪ್ರತಿಷ್ಠಾನದ ಪ್ರಥ್ವಿನ್, ಯೋಗ ಶಿಕ್ಷಕ ವಿನೋದ್, ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕ ಪ್ರಕಾಶ್ ಶೆಟ್ಟಿಗಾರ್, ವಿದ್ಯಾವರ್ಧಕ ಸಂಘ ಬೆಳುವಾಯಿ ಟ್ರಸ್ಟಿ ಯುವರಾಜ್ ಜೈನ್ ಕಲ್ಲೋಳಿ, ಶಾಲೆಯ ಮುಖ್ಯ ಶಿಕ್ಷಕಿ ಶರ್ಮಿಳಾ ವಾಸ್ ಉಪಸ್ಥಿತರಿದ್ದರು.

ಯೋಗ ಶಿಕ್ಷಕ ರಾಜೇಶ್ ಶೆಟ್ಟಿಗಾರ್ ಮಕ್ಕಳಿಗೆ ವಿವಿಧ ಯೋಗಾಸನಗಳನ್ನು ಮಾಡಿಸಿ ಅದರ ಪ್ರಯೋಜನಗಳ ಕುರಿತು ತಿಳಿಸಿದರು. ಪ್ರಾಣ ಪ್ರತಿಷ್ಠಾನದ ಪ್ರಥ್ವಿನ್ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಹೇಗೆ ಸಹಕಾರಿಯಾಗುತ್ತದೆ ಎಂಬುದರ ಕುರಿತು ಮಾಹಿತಿ ನೀಡಿದರು.

ಶಾಲಾ ಸಹಾಯಕ ಆಡಳಿತಾಧಿಕಾರಿ ಅನಿತಾ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸುಮನಾ ಸ್ವಾಗತಿಸಿದರು. ಶಿಕ್ಷಕಿ ಸಂದ್ಯಾ ವಂದಿಸಿದರು.