ಮೂಡುಬಿದಿರೆ: ಜೆಸಿಐ ಮುಂಡ್ಕೂರು ಭಾರ್ಗವ ಹಾಗೂ ಮೂಡಬಿದಿರೆ ಪತಂಜಲಿ ಯೋಗ ಪರಿವಾರ ಕೇಂದ್ರದ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯೋಗ ಶಿಬಿರವು ಜೂನ್ 21ರಂದು ಕಡಂದಲೆ ಪೂಪಡಿಕಲ್ಲು ವಿದ್ಯಾರ್ಥಿ ನಿಲಯದಲ್ಲಿ ನಡೆಯಿತು.

ಶಾಂತಿಪ್ರಸಾದ್ ಹೆಗ್ಡೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಓಸ್ವಾಲ್ಡ್, ಜಗದೀಶ್ ಪೂಜಾರಿ , ನಾರಾಯಣ, ಅರುಣ್ ಹಾಗೂ ಕಿಶೋರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಜೆಸಿಐ ಮುಂಡ್ಕೂರು ಭಾರ್ಗವದ ಪೂರ್ವಾಧ್ಯಕ್ಷ ಸುರೇಂದ್ರ ಭಟ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮೂಡಬಿದಿರೆ ಪತಂಜಲಿ ಯೋಗ ಪರಿವಾರ ಕೇಂದ್ರದ ಯೋಗ ತರಬೇತುದಾರರು ಯೋಗಾಸನಗಳು, ಪ್ರಾಣಾಯಾಮ ಹಾಗೂ ಧ್ಯಾನದ ಮಹತ್ವದ ಕುರಿತು ಮಾಹಿತಿ ನೀಡಿ ಪ್ರಾಯೋಗಿಕ ತರಬೇತಿ ನಡೆಸಿಕೊಟ್ಟರು. ವಿದ್ಯಾರ್ಥಿಗಳು ವಿವಿಧ ಯೋಗಾಸನಗಳನ್ನು ಅಭ್ಯಾಸ ಮಾಡಿ ಯೋಗ ಚಟುವಟಿಕೆಗಳಲ್ಲಿ ಪಾಲ್ಗೊಂಡರು.

ಜೆಸಿಐ ಮುಂಡ್ಕೂರು ಭಾರ್ಗವದ ಪೂರ್ವಾಧ್ಯಕ್ಷರಾದ ಸುರೇಂದ್ರ ಭಟ್, ಗಣೇಶ್ ಆಚಾರ್ಯ, ಸುಧಾಕರ್ ಪೊಸ್ರಾಲ್, ಲೇಡಿ ಜೆಸಿ ಸಂಯೋಜಕ ಅಶ್ವಿನಿ ಅಮೀನ್, ಜೆಸಿ ಸದಸ್ಯ ಸೌಮ್ಯ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.