ಮಂಗಳೂರು : ಹೊಸಂಗಡಿ ಸಮೀಪದ ಮಾಜಿಬೈಲು ನಿವಾಸಿಗಳಾದ ಕೇಶವ ಹಾಗೂ ಲಲಿತಾ ದಂಪತಿಯ ಮನೆಗೆ ಇತ್ತೀಚೆಗೆ ಭಾರೀ ಮಳೆಯಿಂದ ಮರ ಬಿದ್ದು ಮೇಲ್ಛಾವಣಿಗೆ ಗಂಭೀರ ಹಾನಿಯಾಗಿತ್ತು. ಸಂಕಷ್ಟದಲ್ಲಿದ್ದ ಕುಟುಂಬದ ನೆರವಿಗೆ ಧಾವಿಸಿದ ಟೀಮ್ ಕಲ್ಕಿ ಮಂಜೇಶ್ವರ, ದಾನಿಗಳ ಸಹಕಾರದೊಂದಿಗೆ ಸುಮಾರು ₹70 ಸಾವಿರ ವೆಚ್ಚದಲ್ಲಿ ಮನೆ ದುರಸ್ತಿ ಕಾರ್ಯ ಕೈಗೊಂಡು ಪೂರ್ಣಗೊಳಿಸಿದೆ.
ಸಹಾಯ ಕಾರ್ಯಕ್ಕೆ ಯುವ ನಾಯಕ ಹಾಗೂ ಚಲನಚಿತ್ರ ನಟ ಭವೀಶ್ ಶೆಟ್ಟಿ ಏಕ್ಕೂರು, ಮಂಜೇಶ್ವರ ನಗರಸಭಾ ಸದಸ್ಯ ಹರೀಶ್ಚಂದ್ರ ಹಾಗೂ ಚಕ್ರವರ್ತಿ ಕ್ಲಬ್ ಹೊಸಂಗಡಿ ಪ್ರೋತ್ಸಾಹ ನೀಡಿ ಸಹಕರಿಸಿದರು. ನೆರವು ಕಾರ್ಯಕ್ಕೆ ಕೈಜೋಡಿಸಿದ ಎಲ್ಲ ದಾನಿಗಳು ಹಾಗೂ ಹಿತೈಷಿಗಳಿಗೆ ತಂಡದ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಟೀಮ್ ಕಲ್ಕಿ ಉಳ್ಳಾಲದ ಸ್ಥಾಪಕಾಧ್ಯಕ್ಷ ಅಖಿಲ್ ಶೆಟ್ಟಿ, ಟೀಮ್ ಕಲ್ಕಿ ಮಂಜೇಶ್ವರದ ಸ್ಥಾಪಕಾಧ್ಯಕ್ಷ ಅರುಣ್ ಕುಮಾರ್ ದುರ್ಗಿಪಳ್ಳ , ಅಧ್ಯಕ್ಷ ರಂಜಿತ್ ಕುಮಾರ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.