ಮೂಡುಬಿದಿರೆ: ಬನ್ನಡ್ಕದ ಗುರು ರಾಘವೇಂದ್ರ ಕುಣಿತ ಭಜನಾ ಮಂಡಳಿಯು ಜಿಲ್ಲೆಯಾದ್ಯಂತ ಕುಣಿತ ಭಜನೆಯ ಮೂಲಕ ಮಕ್ಕಳಲ್ಲಿ ಭಕ್ತಿ, ವಿನಯ, ವಿಧೇಯತೆ, ಸ್ಪರ್ಧಾತ್ಮಕ ಮನೋಭಾವ ಹಾಗೂ ಸಾತ್ವಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಬನ್ನಡ್ಕ ಸಾರ್ವಜನಿಕ ಶಾರದಾ ಮಹೋತ್ಸವ ಟ್ರಸ್ಟ್ ಅಧ್ಯಕ್ಷ ಎಂ. ದಯಾನಂದ ಪೈ ಹೇಳಿದರು. ಬನ್ನಡ್ಕದ ಗುರು ರಾಘವೇಂದ್ರ ಕುಣಿತ ಭಜನಾ ಮಂಡಳಿಯ ಆಶ್ರಯದಲ್ಲಿ ನಡೆದ ಭಜಕರ ಸಮ್ಮಿಲನ, ಪ್ರಸಕ್ತ ಸಾಲಿನ ಭಜಕ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ ಹಾಗೂ ಸಾಧನಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತರಬೇತುದಾರ ಹಾಗೂ ಸಂಘಟಕ ಸತೀಶ್ ಪೂಜಾರಿ ಸೇವೆಯನ್ನು ಶ್ಲಾಘಸಿದರು. ಭಜಕ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ದಯಾನಂದ ಪೈ ಉದ್ಘಾಟಿಸಿದರು. ಬನ್ನಡ್ಕ ಕ್ಷೇತ್ರದ ಆಡಳಿತ ಮೊಕ್ತೇಸರ ಸುಕುಮಾರ್ ಬಲ್ಲಾಳ್, ಪಡುಮಾರ್ನಾಡು ಗ್ರಾಪಂ ಮಾಜಿ ಅಧ್ಯಕ್ಷ ವಾಸುದೇವ ಭಟ್, ರೂಪ ಬಲ್ಲಾಳ್ ಮಾರ್ನಾಡ್, ಸರಿತಾ ಪೂಜಾರಿ, ನಿತೀಶ್ ಕೋಟ್ಯಾನ್, ಸೂರಜ್ ಜೈನ್ ಮಾರ್ನಾಡು, ಎಂ. ರಾಘವೇಂದ್ರ ಭಂಡಾರ್ಕರ್, ದಿನೇಶ್ ಆಚಾರ್ಯ, ಶಶಿಧರ ಉಜಿರೆ, ವಿಜಯ್ ನೀರ್ಕೆರೆ, ಪ್ರವೀಣ್ ಬೆಳುವಾಯಿ, ಸೌಮ್ಯ ಪೂಜಾರಿ, ಭವ್ಯ ಸತೀಶ್ ಕೋಟ್ಯಾನ್ ಉಪಸ್ಥಿತರಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ರಿತಿ, ಖುಷಿ ಹಾಗೂ ಕೃತಿ ಅವರನ್ನು ಗೌರವಿಸಲಾಯಿತು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು . ಸಂಚಾಲಕ ಸತೀಶ್ ಪೂಜಾರಿ ಪ್ರಸ್ತಾವನೆ ಮಾಡಿದರು ಕೃಪಾ, ಲಹರಿ ಸನ್ಮಾನ ಪತ್ರ ವಾಚಿಸಿದರು. ಉಷಾಕಿರಣ ಸ್ವಾಗತಿಸಿದರು. ಕೌಶಿಕ್ ಕಾರ್ಯಕ್ರಮ ನಿರೂಪಿಸಿದರು.
ಬನ್ನಡ್ಕದ ಗುರು ರಾಘವೇಂದ್ರ ಕುಣಿತ ಭಜನಾ ಮಂಡಳಿ ಭಜಕರ ಸಮ್ಮಿಲನ, ವಿದ್ಯಾನಿಧಿ ವಿತರಣೆ- ಸಾಧನಾ ಪುರಸ್ಕಾರ
ಬನ್ನಡ್ಕದ ಗುರು ರಾಘವೇಂದ್ರ ಕುಣಿತ ಭಜನಾ ಮಂಡಳಿ ಭಜಕರ ಸಮ್ಮಿಲನ, ವಿದ್ಯಾನಿಧಿ ವಿತರಣೆ- ಸಾಧನಾ ಪುರಸ್ಕಾರ