ಮೂಡುಬಿದಿರೆ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಮೂಡುಬಿದಿರೆ ಘಟಕದ ವತಿಯಿಂದ ಅಭಿನಂದನಾ ಕಾರ್ಯಕ್ರಮ, ಕಲೆ, ಸಾಹಿತ್ಯ, ಭಜನಾ ಮತ್ತು ನೃತ್ಯ ತಂಡಗಳ ರಚನೆ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ನಡೆಯಿತು.

ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಮಾರೂರು ಅಧ್ಯಕ್ಷತೆವಹಿಸಿ, ಕಲೆ, ಸಾಹಿತ್ಯ, ಭಜನಾ ಮತ್ತು ನೃತ್ಯ ತಂಡಗಳ ರಚನೆಯ ಅಗತ್ಯತೆ, ಮುಂದಿನ ಕಾರ್ಯಯೋಜನೆ ಹಾಗೂ ತಂಡಗಳ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಆರ್.ಜೆ., ಸಾಹಿತಿ ವಿನೋದ್ ಕುಂಪಲ ಮಾತನಾಡಿ, ಯುವ ಪ್ರತಿಭೆಗಳು ಸಮಯ ಪ್ರಜ್ಞೆಯೊಂದಿಗೆ ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ನಿರಂತರ ಸಾಧನೆಯತ್ತ ಸಾಗಬೇಕು ಎಂದು ಹೇಳಿದರು.

ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶುಭಕರ ಪೂಜಾರಿ ವೇಣೂರು ಸಂಘಟನೆಯ ಚಟುವಟಿಕೆಗಳು ಹಾಗೂ ಯುವಜನರ ಪಾತ್ರದ ಕುರಿತು ವಿವರಿಸಿದರು.

ಸನ್ಮಾನ: ಸಮಾಜಸೇವಾ ಕ್ಷೇತ್ರದ ಸುಧೀಂದ್ರ ಜೆ. ಶಾಂತಿ, ಅಗ್ನಿವೀರ್ ಜೆಡಿ ಹುದ್ದೆಗೆ ಆಯ್ಕೆಯಾದ ವಿರಾಜ್ ಪೂಜಾರಿ ಪಣಪಿಲ, ಭಜನಾ ಕ್ಷೇತ್ರದ ಹರ್ಷಾ ಯು. ಕೋಟ್ಯಾನ್, ನೃತ್ಯ ಹಾಗೂ ಕಲೆ ಕ್ಷೇತ್ರದ ಕೀರ್ತನ್ ಎಸ್. ಶಾಂತಿ ಮತ್ತು ಕಲೆ ಹಾಗೂ ಸಾಹಿತ್ಯ ಕ್ಷೇತ್ರದ ಪೂರ್ಣಿಮಾ ಕೋಟ್ಯಾನ್ ಮಾರ್ನಾಡು ಅವರನ್ನು ಸನ್ಮಾನಿಸಲಾಯಿತು.

ಯುವಸ್ಪಂದನ ಯೋಜನೆಯ ಅಧ್ಯಕ್ಷ ನವಾನಂದ ಮೂಡುಬಿದಿರೆ, ಕಲೆ ಮತ್ತು ಸಾಹಿತ್ಯ ನಿರ್ದೇಶಕಿ ಪ್ರತಿಭಾ ಸುರೇಶ್, ಕೋಶಾಧಿಕಾರಿ ಜಯಶೀಲಾ ಪೂಜಾರಿ ಹಾಗೂ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ನೂತನ ಸದಸ್ಯರ ಸೇರ್ಪಡೆಗೊಂಡರು. ಪೂರ್ಣಿಮಾ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ಚಂದ್ರ ಡಿ.ಕೆ. ಸ್ವಾಗತಿಸಿದರು. ಗಿರೀಶ್ ಕೋಟ್ಯಾನ್ ವಂದಿಸಿದರು.

ವರದಿ: ಪೂರ್ಣಿಮಾ ಕೋಟ್ಯಾನ್, ಮಾರ್ನಾಡ್