ಮೂಡುಬಿದಿರೆ: ಶಿಕ್ಷಣದ ಮೂಲಕ ಸಮಾಜಕ್ಕೆ ಮರಳಿ ಕೊಡುಗೆ ನೀಡುವ ಉದ್ದೇಶದಿಂದ ಬಾಬು ರಾಜೇಂದ್ರ ಪ್ರಸಾದ್ ಶಾಲೆಯ ಹಳೆ ವಿದ್ಯಾರ್ಥಿ ಧೀರಜ್ ಶೆಣೈ ಅವರು ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಶಾಲಾ ಬ್ಯಾಗ್‌ಗಳನ್ನು ವಿತರಿಸಿದರು.

ಧೀರಜ್ ಶೆಣೈ ಅವರ ಪತ್ನಿ ನಿವೇದಿತಾ ಶೆಣೈ, ಮಕ್ಕಳಾದ ಋಷಿಕಾ ಮತ್ತು ಜಾನ್ವಿ, ಕೃತ್ತಿಕಾ ಕಾಮತ್, ಶಿವಪ್ರಸಾದ್, ಪಂಚಮಿ ಶಿವಪ್ರಸಾದ್ ಹಾಗೂ ಸುಮಂತ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೀಪಕ್ ಶೆಣೈ, ಸುರೇಂದ್ರ ಕಾಮತ್ ಹಾಗೂ ಸುರೇಖಾ ಪುರುಷೋತ್ತಮ ಶೆಣೈ ಅವರು ಈ ಸೇವಾ ಕಾರ್ಯಕ್ಕೆ ಧೀರಜ್ ಶೆಣೈ ಅವರೊಂದಿಗೆ ಕೈಜೋಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಧೀರಜ್ ಶೆಣೈ, ಇದು ನನ್ನ ಕರ್ತವ್ಯ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಮುಂದೊಂದು ದಿನ ನೀವೂ ಸಮಾಜದೊಂದಿಗೆ ತೊಡಗಿಸಿಕೊಂಡು ಕೃತಜ್ಞತಾಭಾವದಿಂದ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.

ಶಾಲಾ ಸಂಚಾಲಕ ರಾಮನಾಥ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ತೆರಸಾ ಕರ್ಡೋಜಾ, ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದ, ಶಾಲೆಯ ಹಳೆ ವಿದ್ಯಾರ್ಥಿ ರಾಘವೇಂದ್ರ ಉಪಸ್ಥಿತರಿದ್ದರು.

ಕಿರಣ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ಸಾನಿಕಾ ಹಾಗೂ ವಿದ್ಯಾರ್ಥಿ ಅನ್ವಿತ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.