ಮೂಡುಬಿದಿರೆ: ಅಗರಿ ಎಂಟರ್‌ಪ್ರೆಸಸ್ ವತಿಯಿಂದ ಆಯೋಜಿಸಲಾದ ಹಬ್ಬಹಬ್ಬಗಳ ಉತ್ಸವ ಪ್ರತಿದಿನ ಒಂದು ಬಹುಮಾನ 100 ದಿನ 100 ಬಹುಮಾನ ಸರಣಿ ಕಾರ್ಯಕ್ರಮದ 9ನೇ ಹಂತದ ಬಂಪರ್ ಡ್ರಾ ಮೂಡುಬಿದಿರೆ ಗಾಂಧಿನಗರ ಶಾಖೆಯಲ್ಲಿ ನಡೆಯಿತು. ದ.ಕ ಜಿಲ್ಲಾ ಪಂಚಾಯಿತಿ ನಿವೃತ್ತ ಕಾರ್ಯನಿರ್ವಹಕರಾದ ವಿಶ್ವನಾಥ ಎಂ.ಶೆಣೈ., ಮೂಡುಬಿದಿರೆ ಶಾಲೆಯ ಶಿಕ್ಷಕಿ ಮೇಘಾ, ಸಚ್ಚರಿಪೇಟೆಯ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಸತ್ಯ ಶಂಕರ್ ಶೆಟ್ಟಿ, ವೇಣೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸುಜಾತ, ಸಂಪಿಗೆ ಶ್ರೀ ದುರ್ಗಾ ಜ್ಯೋತಿಷ್ಯಾಲಯದ ಡಾ.ಯೋಗಿ ಸುಧಾಕರ ತಂತ್ರಿ, ಆಳ್ವಾಸ್ ಸಂಸ್ಥೆಯ ಫೈನಾನ್ಸ್ ಆಫೀಸರ್ ಶಾಂತರಾಮ ಕಾಮತ್, ಪುರಸಭೆ ಸಿಬ್ಬಂದಿ ವಿಕ್ರಂ ಪ್ರಭು, ಇರ್ವತಯ್ತೂರು ರಾಯಲ್ ಡೆಕೋರೇರ‍್ಸ್-ಕ್ಯಾಟರರ್ಸ್ನೆಕ್ ನಯಾಝ್, ಚಿತ್ರಾ ಎಲೆಕ್ಟಿçಕಲ್ ಬೆಳುವಾಯಿಯ ರಂಜಿತ್ ಕುಮಾರ್, ಅಲಂಗಾರು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷೆ ಜೆಸಿಂತಾ ಡಿಮೆಲ್ಲೊ ಮುಖ್ಯ ಅತಿಥಿಗಳಾಗಿದ್ದರು. ಅಗರಿ ಸಂಸ್ಥೆಯ ಮಾಲಕ ಅಗರಿ ರಾಘುವೇಂದ್ರ ರಾವ್ ಅತಿಥಿಗಳನ್ನು ಗೌರವಿಸಿದರು. ವಾಯ್ಸ್ ಆಫ್ ಆರಾಧನ ತಂಡದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಗರಿ ವಾದಿರಾಜ್ ರಾವ್, ಮೆನೇಜರ್ ಸುಭಾಸ್, ಸಿಬ್ಬಂದಿಗಳು ಉಪಸ್ಥಿತರಿದ್ದರು.