ಮೂಡುಬಿದಿರೆ: “ಭಾರತ ಉಚಿತ ಲ್ಯಾಪ್‌ಟಾಪ್ ಯೋಜನೆ 2026” ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶ ಮತ್ತು ಲಿಂಕ್‌ಗಳು ನಕಲಿ ಎಂದು ದೃಢಪಟ್ಟಿದ್ದು, ಮೂಡುಬಿದಿರೆಯ ವಾಟ್ಸ್ಅಪ್ ಗುಂಪುಗಳಲ್ಲಿ ವೈರಲ್ ಆಗುತ್ತಿದೆ.
ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ವೈಯಕ್ತಿಕ ಮಾಹಿತಿ ಕದಿಯುವ ಉದ್ದೇಶದಿಂದ ಈ ರೀತಿಯ ಮೋಸಕಾರಿ ವೆಬ್‌ಸೈಟ್‌ಗಳು ಸಕ್ರಿಯವಾಗಿವೆ.
Press Information Bureau ಈ ಕುರಿತು ಸ್ಪಷ್ಟನೆ ನೀಡಿದ್ದು, ಕೇಂದ್ರ ಸರ್ಕಾರದ ವತಿಯಿಂದ ಇಂತಹ ಯಾವುದೇ ಉಚಿತ ಲ್ಯಾಪ್‌ಟಾಪ್ ಯೋಜನೆ ಘೋಷಿಸಲ್ಪಟ್ಟಿಲ್ಲ ಎಂದು ತಿಳಿಸಿದೆ. “PM Free Laptop Scheme 2026” ಅಥವಾ ವಿದ್ಯಾರ್ಥಿಗಳಿಗೆ ₹25,000 ಸಹಾಯಧನ ನೀಡಲಾಗುತ್ತದೆ ಎಂಬ ಹೇಳಿಕೆಗಳೂ ಸುಳ್ಳು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೋಸದ ಲಕ್ಷಣಗಳು
ಈ ರೀತಿಯ ನಕಲಿ ಸಂದೇಶಗಳಲ್ಲಿ ಕೆಲವು ಸಾಮಾನ್ಯ ಲಕ್ಷಣಗಳು ಕಂಡುಬರುತ್ತವೆ:
- ಅಪರಿಚಿತ ವೆಬ್‌ಸೈಟ್‌ಗಳು (ಉದಾ: .xyz domain)
- “ಸೀಮಿತ ಅವಕಾಶ” ಎಂದು ತುರ್ತು ಒತ್ತಡ ಸೃಷ್ಟಿಸುವುದು
- “ಇದೀಗಲೇ ನೋಂದಣಿ ಮಾಡಿ” ಎಂಬ ಆಮಿಷ
- ಅರ್ಜಿ ಸಲ್ಲಿಸಿದವರಿಗೆ ಈಗಾಗಲೇ ಲಾಭ ಸಿಗುತ್ತಿದೆ ಎಂಬ ಸುಳ್ಳು ಪ್ರಚಾರ ಕೇಳಿ ಬರುತ್ತಿದೆ.