ಮೂಡುಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ ಸಿಬಿಎಸ್‌ಇ ಪರೀಕ್ಷೆಯಲ್ಲಿ ಆಳ್ವಾಸ್ ಸಿಬಿಎಸ್‌ಇ ಶಾಲೆ ಸತತ ಆರನೇ ವರ್ಷವೂ ಶೇ.100 ಫಲಿತಾಂಶ ದಾಖಲಿಸಿದೆ. ಶಾಲೆಯ 46 ವಿದ್ಯಾರ್ಥಿಗಳು ಶೇ.95ಕ್ಕಿಂತ ಹೆಚ್ಚು ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ರಾಜ್ಯದ ಒಂದು ಶಾಲೆಯಿಂದ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಳ್ವಾಸ್ ಪ್ರಥಮ ಸ್ಥಾನ ಪಡೆದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅನಘಾ ಉಮೇಶ್‌ರಾವ್(ಶೇ.99.2), ಪ್ರಮತ್ ಔರಾದ್ಕರ್ (ಶೇ.99), ಆದ್ಯಾ ಭಟ್ (99), ಅನುರಾಧ(99), ವಾತ್ಸಲ್ಯ ಎನ್ (98), ಧನ್ವಿತ್ ಪಿಬಿ(97.2), ನಮ್ರತಾ(97.2), ಮನೋಘ್ನ(97), ಶ್ವೇತಾ(97), ಶಿವಾನಿ ಜಿಎ(97), ವಾಘ್ಮಿ ಪ್ರಶಾಂತ್ (97), ಅವನಿ ಪಿ.ಶೆಟ್ಟಿ (97), ವಿಭಾಸ್(97), ಯಕ್ಷಿತಾ (96.4), ಸೃಜನ್(96.4), ಗೌತಮ್ (96.4), ಪ್ರತೀಕ್ಷಾ ಕೆ ಎಂ(96.4), ಸಾನ್ವಿ(96.4), ಜನಿತ್ (96.2), ಭಾರ್ಗವ್ (96), ಜಶ್ಮಿತಾ(96), ಐಶ್ರೀ ಶೆಟ್ಟಿ (96), ಆದಿಲ್ (96), ಧೃತಿ (96), ನಿಶ್ಚಲ್ (96), ಹಿತೈಶಿ (96), ಪ್ರಥಮ್ (96), ಆದ್ರಿತ್(95.4), ಸುಮಿತ್( 95.2), ಐಶಾನಿ(95.2), ಭೃತಿ(95), ಪೂರ್ವಿಕ್ (95), ತರುಂಜನ್(95), ಸಾಯಿದೀಕ್ಷಾ(95), ಅಂಜನಾತನಯ್(95), ಗ್ಲೋರಿ ಪ್ರಕಾಶ್(95), ಅಂಜನಿ(95), ದಿವ್ಯಾ(95), ಧನ್ಯಾ(95), ನಿಶಾ(95), ಅಧ್ವಿತಿ(95), ಯಶಶ್ವಿ (95), ಸಂಜನಾ(95), ಹರ್ಷವರ್ಧನ್ (95) ರೋಹಿತ್(95), ಸಿದ್ಧಾರ್ಥ(95) ಅಂಕಗಳನ್ನು ಪಡೆದಿದ್ದಾರೆ. 116 ವಿದ್ಯಾರ್ಥಿಗಳು ಶೇ.90 ಗಿಂತ ಹೆಚ್ಚು ಅಂಕ ಗಳಿಸಿದರೆ, 185 ವಿದ್ಯಾರ್ಥಿಗಳು 85%, ಹಾಗೂ225 ವಿದ್ಯಾರ್ಥಿಗಳು ಶೇ.80ಕ್ಕಿಂತ ಅಧಿಕ ಅಂಕವನ್ನು ಗಳಿಸಿದ್ದಾರೆ. ಸಂಸ್ಕೃತದಲ್ಲಿ 7 ವಿದ್ಯಾರ್ಥಿಗಳು, ಹಿಂದಿಯಲ್ಲಿ 4 ವಿದ್ಯಾರ್ಥಿಗಳು, ಸಮಾಜ ವಿಜ್ಞಾನದಲ್ಲಿ -3, ಕನ್ನಡದಲ್ಲಿ-3, ವಿಜ್ಞಾನ ಹಾಗೂ ಇಂಗ್ಲೀಷ್‌ನಲ್ಲಿ ತಲಾ ಒರ್ವ ವಿದ್ಯಾರ್ಥಿ ಶೇ.100 ಅಂಕ ಪಡೆದಿದ್ದಾರೆ. ಐಟಿ ವಿಷಯದಲ್ಲಿ 17 ವಿದ್ಯಾಥಿಗಳು ಶೇ.100 ಅಂಕ ಗಳಿಸಿದ್ದಾರೆ. ವಿಷಯವಾರು ಅಂಕಗಳಲ್ಲಿ, 36 ವಿದ್ಯಾರ್ಥಿಗಳು ಶೇ.100, 69 ವಿದ್ಯಾರ್ಥಿಗಳು ಶೇ.99 ಅಂಕ, 117 ವಿದ್ಯಾರ್ಥಿಗಳು ಶೇ.98, 175 ವಿದ್ಯಾರ್ಥಿಗಳು ಶೇ.97, 255 ವಿದ್ಯಾರ್ಥಿಗಳು ಶೇ.96, 335 ವಿದ್ಯಾಥಿಗಳು ಶೇ.95 ಅಂಕಗಳಿಸಿದ್ದಾರೆ. ಆಡಳಿತಾಧಿಕಾರಿ ಪ್ರೀತಂಕುಂದರ್, ಆಳ್ವಾಸ್ ಸಿ.ಬಿ.ಎಸ್.ಇ ಶಾಲೆಯ ಮುಖ್ಯಶಿಕ್ಷಕ ಮೊಹಮ್ಮದ್ ಶಫಿ ಶೇಖ್ ಸುದ್ದಿಗೋಷ್ಠಿಯಲ್ಲಿದ್ದಾರೆ.
ಜಗತ್ತಿನಾದ್ಯಂತ ಶೇ.95ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು 2.24 ಶೇಕಡಾವಾರು ಆದರೆ, ಆಳ್ವಾಸ್‌ನಲ್ಲಿ ಶೇ.10.33 ವಿದ್ಯಾರ್ಥಿಗಳು ಈ ಸಾಧನೆ ಮೆರೆದಿದ್ದಾರೆ, ಅಂತೆಯೇ ರಾಷ್ಟ್ರ ಮಟ್ಟದಲ್ಲಿ 90 ಶೇಕಡಾಕ್ಕಿಂತ ಅಧಿಕ ಶೇ.8.96 ಆದರೆ, ಆಳ್ವಾಸ್‌ನಲ್ಲಿ ಶೇ.26 ವಿದ್ಯಾರ್ಥಿಗಳು ಈ ಸಾಧನೆ ಮೆರೆದಿದ್ದಾರೆ. ವಿದ್ಯಾರ್ಥಿಗಳಿಗೆ ಪಿಯುಸಿ ಹಾಗೂ ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸುವ ಸಲುವಾಗಿ ಆಳ್ವಾಸ್ ಸಿಬಿಎಸ್‌ಇ ಶಾಲೆಯಲ್ಲಿ ಕಠಿಣವಾದ ಸ್ಟಾö್ಯಂಡರ್ಡ ಮ್ಯಾಥ್ಸ್ ವಿಷಯವನ್ನು ಇತರ ವಿಷಯಗಳೊಂದಿಗೆ ಭೋಧಿಸಲಾಗುತ್ತಿದ್ದು, ಈ ವಿಷಯ ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆ ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ಬೆಳೆಸುತ್ತದೆ ಎಂದು ಮೋಹನ ಆಳ್ವ ತಿಳಿಸಿದ್ದಾರೆ.