ಮೂಡುಬಿದಿರೆ: ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ಒಟ್ಟು 85 ರ‍್ಯಾಂಕ್‌ಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ರಾಜ್ಯದ ಟಾಪ್ 10 ರ‍್ಯಾಂಕ್‌ಗಳಲ್ಲಿ 5 ರ‍್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ ಕಳೆದ 4 ವರ್ಷಗಳಲ್ಲಿ ಸಮಗ್ರ ಪದವಿಯಲ್ಲಿ ಮೂರು ಬಾರಿ ಪ್ರಥಮ ರ‍್ಯಾಂಕ್‌ನ್ನು ಗಳಿಸಿದ್ದಾರೆ. ಡಾ. ಪವಿತ್ರ ಸಮಗ್ರ ಪದವಿಯಲ್ಲಿ ಪ್ರಥಮ ರ‍್ಯಾಂಕ್‌ನೊಂದಿಗೆ ಚಿನ್ನದ ಪದಕ ವಿಜೇತರಾಗಿದ್ದು, ದ್ವಿತೀಯ ವರ್ಷದ ಹೋಮಿಯೋಪಥಿ ಪರೀಕ್ಷೆಯಲ್ಲಿ 1ನೇ ರ‍್ಯಾಂಕ್, ತೃತೀಯ ವರ್ಷದಲ್ಲಿ 7ನೇ ರ‍್ಯಾಂಕ್ ಹಾಗೂ ನಾಲ್ಕನೇ ವರ್ಷದಲ್ಲಿ 1ನೇ ರ‍್ಯಾಂಕ್ ಗಳಿಸಿದ್ದಾರೆ. ಡಾ. ಐಶ್ವರ್ಯ ಟಿ.ಸಿ. ಸಮಗ್ರ ಪದವಿಯಲ್ಲಿ 5ನೇ ರ‍್ಯಾಂಕ್ ಪಡೆದರೆ, ಪ್ರಥಮ ವರ್ಷದಲ್ಲಿ 2ನೇ ರ‍್ಯಾಂಕ್, ದ್ವಿತೀಯ ವರ್ಷದಲ್ಲಿ 7ನೇ ರ‍್ಯಾಂಕ್ ಹಾಗೂ ನಾಲ್ಕನೇ ವರ್ಷದಲ್ಲಿ 3ನೇ ರ‍್ಯಾಂಕ್ ಗಳಿಸಿದ್ದಾರೆ.

ಡಾ. ಅಕ್ಷತಾ ಸಮಗ್ರ ಪದವಿಯಲ್ಲಿ 6ನೇ ರ‍್ಯಾಂಕ್ ಗಳಿಸಿದರೆ, ಪ್ರಥಮ ವರ್ಷದಲ್ಲಿ 7ನೇ ರ‍್ಯಾಂಕ್, ದ್ವಿತೀಯ ವರ್ಷದಲ್ಲಿ 4ನೇ ರ‍್ಯಾಂಕ್ ಹಾಗೂ ನಾಲ್ಕನೇ ವರ್ಷದಲ್ಲಿ 6ನೇ ರ‍್ಯಾಂಕ್ ಪಡೆದಿದ್ದಾರೆ. ಡಾ. ಶೆಟ್ಟಿ ಶೃಷ್ಟಿ ಶ್ರೀಧರ್ ಸಮಗ್ರ ಪದವಿಯಲ್ಲಿ 8ನೇ ರ‍್ಯಾಂಕ್ ಗಳಿಸಿದ್ದು, ನಾಲ್ಕನೇ ವರ್ಷದಲ್ಲಿ 2ನೇ ರ‍್ಯಾಂಕ್ ಪಡೆದಿದ್ದಾರೆ. ಡಾ. ಅಂಜಲಿ ರಾಜ್ ವಿ. ಸಮಗ್ರ ಪದವಿಯಲ್ಲಿ 10ನೇ ರ‍್ಯಾಂಕ್ ಪಡೆದು, ದ್ವಿತೀಯ ವರ್ಷದಲ್ಲಿ 5ನೇ ರ‍್ಯಾಂಕ್ ಹಾಗೂ ನಾಲ್ಕನೇ ವರ್ಷದಲ್ಲಿ 8ನೇ ರ‍್ಯಾಂಕ್ ಗಳಿಸಿದ್ದಾರೆ. ಡಾ. ಎಂ. ಸ್ಮಿತಾ ಕಿಣಿ ತೃತೀಯ ವರ್ಷದಲ್ಲಿ 8ನೇ ರ‍್ಯಾಂಕ್ ಪಡೆದಿದ್ದು, ವಿಷಯವಾರು ರ‍್ಯಾಂಕ್‌ಗಳಲ್ಲಿ ಮೆಟೀರಿಯಾ ಮೆಡಿಕಾ ವಿಷಯದಲ್ಲಿ 3ನೇ ರ‍್ಯಾಂಕ್, ರೆಪರ್ಟರಿ 7ನೇ ರ‍್ಯಾಂಕ್, ಒಬಿಜಿ8ನೇ ರ‍್ಯಾಂಕ್ ಹಾಗೂ ಅನಾಟಮಿಯಲ್ಲಿ 10ನೇ ರ‍್ಯಾಂಕ್ ಗಳಿಸಿದ್ದಾರೆ. ಡಾ.ಸೀಮಾ ಥಾಪಾ ಮೆಟೀರಿಯಾ ಮೆಡಿಕಾ ವಿಷಯದಲ್ಲಿ ಎರಡನೇ ವರ್ಷದ ಪದವಿಯಲ್ಲಿ 2ನೇ ರ‍್ಯಾಂಕ್ ಮತ್ತು ನಾಲ್ಕನೇ ವರ್ಷದ ಪದವಿಯಲ್ಲಿ 3ನೇ ರ‍್ಯಾಂಕ್, ರೆಪರ್ಟರಿ 5ನೇ ರ‍್ಯಾಂಕ್ ಹಾಗೂ ಫೊರೆನ್ಸಿಕ್ ಮೆಡಿಸಿನ್‌ನಲ್ಲಿ 6ನೇ ರ‍್ಯಾಂಕ್ ಗಳಿಸಿದ್ದಾರೆ.

ಡಾ. ಶ್ರೇಯಾ ಎಸ್ ಪವಿತ್ರನ್ ಎಫ್‌ಎಮ್‌ಟಿಯಲ್ಲಿ 7ನೇ ರ‍್ಯಾಂಕ್, ರೆಪರ್ಟರಿ 8ನೇ ರ‍್ಯಾಂಕ್, ಪೆಥಾಲಜಿ 9ನೇ ರ‍್ಯಾಂಕ್ ಹಾಗೂ ಮೆಟೀರಿಯಾ ಮೆಡಿಕಲ್‌ನಲ್ಲಿ 10ನೇ ರ‍್ಯಾಂಕ್ ಗಳಿಸಿದ್ದಾರೆ. ಡಾ.ಎಂ.ಐ. ಶರಧಿ ಎಫ್‌ಎಮ್‌ಟಿ ಹಾಗೂ ಮೆಟೀರಿಯಾ ಮೆಡಿಕಾ ಎರಡೂ ವಿಷಯದಲ್ಲಿ 4ನೇ ರ‍್ಯಾಂಕ್ ಹಾಗೂ ಫಾರ್ಮಸಿ 5ನೇ ರ‍್ಯಾಂಕ್ ಪಡೆದಿದ್ದಾರೆ. ಡಾ. ಪಲಕೂರ್ತಿ ಕಿರಣ್ಮಯಿ ರೆಪರ್ಟರಿ4ನೇ ರ‍್ಯಾಂಕ್, ಎಫ್‌ಎಮ್‌ಟಿ 5ನೇ ರ‍್ಯಾಂಕ್ ಹಾಗೂ ಫಾರ್ಮಸಿ 9ನೇ ರ‍್ಯಾಂಕ್ ಗಳಿಸಿದ್ದಾರೆ. ಡಾ. ಸ್ವಾತಿ ಎಂ.ಎಸ್. ಮೆಟೀರಿಯಾ ಮೆಡಿಕಾ ವಿಷಯದಲ್ಲಿ ಮೂರನೇ ವರ್ಷದ ಪದವಿಯಲ್ಲಿ 6ನೇ ರ‍್ಯಾಂಕ್ ಮತ್ತು ನಾಲ್ಕನೇ ವರ್ಷದ ಪದವಿಯಲ್ಲಿ 7ನೇ ರ‍್ಯಾಂಕ್ ಹಾಗೂ ರೆಪರ್ಟರಿ ವಿಷಯದಲ್ಲಿ 8ನೇ ರ‍್ಯಾಂಕ್ ಪಡೆದಿದ್ದಾರೆ. ಡಾ. ಸಾವಂತ್ ಅನುಷ್ಕಾ ದಿನೇಶ್ ಅನಾಟಮಿ ಮತ್ತು ರೆಪರ್ಟರಿ ಎರಡರಲ್ಲೂ 8ನೇ ರ‍್ಯಾಂಕ್ ಗಳಿಸಿದ್ದಾರೆ. ಡಾ. ಅಫ್ರಾ ಪಿ. ಎಫ್‌ಎಮ್‌ಟಿ 6ನೇ ರ‍್ಯಾಂಕ್ ಪಡೆದರೆ, ಡಾ. ಅನೀಷಾ ಎಫ್‌ಎಮ್‌ಟಿಯಲ್ಲಿ 8ನೇ ರ‍್ಯಾಂಕ್, ಡಾ. ಆರ್ಥಿ ಆರ್. ಫಾರ್ಮಸಿ ವಿಷಯದಲ್ಲಿ 1ನೇ ರ‍್ಯಾಂಕ್, ಡಾ. ನಿಖಿತಾ ಸಿ. ಸಮುದಾಯ ವೈದ್ಯಕೀಯದಲ್ಲಿ 4ನೇ ರ‍್ಯಾಂಕ್, ಡಾ. ಶಧಾ ರಹೀಮ್ ವಿ. ಎಫ್‌ಎಮ್‌ಟಿ 8ನೇ ರ‍್ಯಾಂಕ್, ಡಾ. ಸೋನಾಲಿ ದತವಾಡ ಮೆಟೀರಿಯಾ ಮೆಡಿಕಾ 10ನೇ ರ‍್ಯಾಂಕ್, ಡಾ. ಸ್ವಲೇಹಾ ತಬಸ್ಸುಮ್ ಖಾತೀಬ್ ಆರ್ಗನಾನ್ ಆಫ್ ಮೆಡಿಸಿನ್ ವಿಷಯದಲ್ಲಿ 8ನೇ ರ‍್ಯಾಂಕ್ ಪಡೆದಿದ್ದಾರೆ. ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ ಆಳ್ವ, ಪ್ರಾಂಶುಪಾಲ ಡಾ.ರೋಷನ್ ಪಿಂಟೊ ಅಭಿನಂದಿಸಿದ್ದಾರೆ.