ಮೂಡುಬಿದಿರೆ: ಮೂಲ್ಕಿ-ಮೂಡುಬಿದಿರೆ ಮಂಡಲದ ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆಯನ್ನು ವಿದ್ಯಾಗಿರಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಪಕ್ಷದ ಮುಖಂಡ, ಹಿರಿಯ ವಕೀಲ ಎಂ. ಬಾಹುಬಲಿ ಪ್ರಸಾದ್ ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗಿ ಕಾರ್ಯನಿರ್ವಹಿಸಲು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರ. ಸಂವಿಧಾನದಲ್ಲಿ ಜನರ ಹಕ್ಕು ಮತ್ತು ಕರ್ತವ್ಯಗಳನ್ನು ಸವಿಸ್ತಾರವಾಗಿ ನಮೂದಿಸಿರುವುದರಿಂದ, ದೇಶದಲ್ಲಿ ಶಾಂತಿಯುತವಾಗಿ ಕಾರ್ಯ ನಿರ್ವಹಣೆಗೆ ಭದ್ರ ಬುನಾದಿ ಸಿಕ್ಕಿದೆ ಎಂದರು. ಬಿಜೆಪಿ ಹಿರಿಯ ನಾಯಕ ಕೆ.ಆರ್. ಪಂಡಿತ್ ಅವರು ಅಂಬೇಡ್ಕರ್ ಜೀವನ ಚರಿತ್ರೆ ಮತ್ತು ಸಾಧನೆಗಳನ್ನು ಸ್ಮರಿಸಿದರು. ರಾಮಚಂದ್ರ ಬೈಕಂಪಾಡಿ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷö್ಮಣ್ ಪೂಜಾರಿ, ಮುಖಂಡಮೇಘನಾಥ್ ಶೆಟ್ಟಿ, ಮಾಜಿ ಪುರಸಭಾ ಅಧ್ಯಕ್ಷ ನಾಗರಾಜ್ ಪೂಜಾರಿ ಒಂಟಿಕಟ್ಟೆ, ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಅಣ್ಣಪ್ಪ, ಪ್ರಮುಖರಾದ ಪ್ರಸಾದ್ ಭಂಡಾರಿ, ದಿನೇಶ್ ಕುಮಾರ್, ವಿಠಲ ದೇವಾಡಿಗ, ಶಕ್ತಿ ಕೇಂದ್ರದ ಪ್ರಮುಖ ಕರುಣಾಕರ್ ಶೆಟ್ಟಿ ಮತ್ತಿತರರಿದ್ದರು.
ಬಿಜೆಪಿ ಮೂಡುಬಿದಿರೆ ನಗರ ಮಹಾಶಕ್ತಿಕೇಂದ್ರದಿಂದ ಅಂಬೇಡ್ಕರ್ ಜನ್ಮದಿನಾಚರಣೆ
ಬಿಜೆಪಿ ಮೂಡುಬಿದಿರೆ ನಗರ ಮಹಾಶಕ್ತಿಕೇಂದ್ರದಿಂದ ಅಂಬೇಡ್ಕರ್ ಜನ್ಮದಿನಾಚರಣೆ