ಮೂಡುಬಿದಿರೆ: ಬೆದ್ರ ಉತ್ಸವ ಸಮಿತಿ ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿ ನಡೆದ ಬೆದ್ರ ಉತ್ಸವದ ಸಮಾರೋಪ ಸಮಾರಂಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಹಕಾರಿ ರತ್ನ ಡಾ.ಎಂ.ಎನ್‌ರಾಜೇಂದ್ರ ಕುಮಾರ್, ಅದಾನಿ ಗ್ರೂಪ್ ಅಧ್ಯಕ್ಷ (ದಕ್ಷಿಣ ಭಾರತ) ಕಿಶೋರ್ ಆಳ್ವ ಅವರಿಗೆ ಬೆದ್ರ ಮಾಣಿಕ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಎಂ.ಎನ್‌ರಾಜೇಂದ್ರ ಕುಮಾರ್, ಮೂಡುಬಿದಿರೆ ನನ್ನ ಬದುಕಿಗೆ ಹೊಸ ತಿರುವು ನೀಡಿದ ಊರು. ವೃತ್ತಿ ಜೀವನ ಆರಂಭವದದ್ದು ಇಲ್ಲೆ. ಇಲ್ಲಿಂದಲೇ ಸಹಕಾರಿ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ್ದು, ಊರಿಗೆ ಸದಾ ಚಿರಋಣಿ ಎಂದರು. ಕಿಶೋರ್ ಆಳ್ವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ನನ್ನ ಬದುಕಿಗೆ ಮೂಡುಬಿದಿರೆಯೊಂದು ಸ್ಪೂರ್ತಿ. ಅನಾರೋಗ್ಯದಲ್ಲಿರುವಾಗ ಡಾ.ಮೋಹನ ಆಳ್ವರು ನನಗೆ ಪುರ್ನಜನ್ಮ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಊರಲ್ಲೇ ನೆಲಸಲು ನಿರ್ಧರಿಸಿದ್ದೇನೆ ಎಂದರು. ವಕೀಲ ಶರತ್ ಶೆಟ್ಟಿ ಮಾತನಾಡಿ, ಆದಾನಿ ಸಂಸ್ಥೆಯಿಂದ ಹಲವಾರು ಮಂದಿ ನೆಲೆಯನ್ನು ಕಂಡುಕೊಂಡಿದ್ದಾರೆ. ಮೂಡುಬಿದಿರೆಯಲ್ಲೂ ಒಂದು ಸಂಸ್ಥೆಯನ್ನು ತೆರೆದು ಇಲ್ಲಿನ ಯುವಕರಿಗೆ ಉದ್ಯೋಗದ ಅವಕಾಶವನ್ನು ಕಲ್ಪಿಸುವಂತೆ ಕಿಶೋರ್ ಆಳ್ವ ಅವರಲ್ಲಿ ವಿಶೇಷವಾಗಿ ಕೋರಿದರು. ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಹಿರಿಯ ವಕೀಲ, ಎಂ. ಸಿ. ಎಸ್ ಬ್ಯಾಂಕಿನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ ಎಂ., ಮುಖಂಡ ಕೆ.ಪಿ ಜಗದೀಶ್ ಅಧಿಕಾರಿ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಪುರಸಭೆ ಮಾಜಿ ಅಧ್ಯಕ್ಷರಾದ ಜಯಶ್ರೀ ಕೇಶವ್, ಪ್ರಸಾದ್ ಕುಮಾರ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಉದ್ಯಮಿಗಳಾದ ರಾಜೇಂದ್ರ ಕುಮಾರ್ ಜೈನ್, ಮಹೇಂದ್ರವರ್ಮ, ವಕೀಲರಾದ ಚೇತನ್ ಕುಮಾರ್ ಶೆಟ್ಟಿ, ಬೆದ್ರ ಉತ್ಸವ ಸಮಿತಿಯ ಉಪಾಧ್ಯಕ್ಷ ಸುದರ್ಶನ ಎಂ., ಸಂಚಾಲಕ ಹರೀಶ್ ದೇವಾಡಿಗ, ಕೋಶಾಧಿಕಾರಿ ನಾಗೇಶ್ ಬಂಗೇರ, ಲಕ್ಷ್ಮಣ್ ಪೂಜಾರಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಗೋಪಾಲ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ದೇವಾಡಿಗ ಅವರಿಂದ `ನಾದ ವೈಭವ', ರಾತ್ರಿ ಅನೀಶ್ ಎಸ್. ನೇತೃತ್ವದ ಎಂ.ಜೆ ಸ್ಟೆಪ್ ಅಪ್ ತಂಡದಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ನಡೆಯಿತು. ಯಿತು.
ಬೆದ್ರ ಉತ್ಸವ ಸಂಪನ್ನ: ಎಂ.ಎನ್. ರಾಜೇಂದ್ರ ಕುಮಾರ್, ಕಿಶೋರ್ ಆಳ್ವ ಬೆದ್ರ ಮಾಣಿಕ್ಯ ಪ್ರಶಸ್ತಿ ಪ್ರದಾನ
ಬೆದ್ರ ಉತ್ಸವ ಸಂಪನ್ನ: ಎಂ.ಎನ್. ರಾಜೇಂದ್ರ ಕುಮಾರ್, ಕಿಶೋರ್ ಆಳ್ವ ಬೆದ್ರ ಮಾಣಿಕ್ಯ ಪ್ರಶಸ್ತಿ ಪ್ರದಾನ