ಕಾರ್ಕಳ: ಕಟ್ಟೆ ಫ್ರೆಂಡ್ಸ್ ನಿಟ್ಟೂರು, ಉಡುಪಿ ಇವರ ಸಾರಥ್ಯದಲ್ಲಿ ಯುಗಾದಿ ಸಂಭ್ರಮ 2026ರ ಪ್ರಯುಕ್ತ ಆಯೋಜಿಸಲಾಗಿದ್ದ ‘ತೆಲಿಪುಲೆ ತೆಲಿಪಾಲೆ’ ಕುಸಲ್ದ ಪಂಥ (ಹಾಸ್ಯ ಸ್ಪರ್ಧೆ) ಸ್ಪರ್ಧೆಯಲ್ಲಿ ಬೊಳ್ಳಿ ಕಲಾವಿದೆರ್ ಬಜಗೋಳಿ ತಂಡವು ಪ್ರಥಮ ಸ್ಥಾನವನ್ನು ಗಳಿಸಿತು. ನಿಟ್ಟೂರು ಅಡ್ಕದಕಟ್ಟೆಯಲ್ಲಿರುವ ಸಲ್ಫಾ ಗ್ರೌಂಡ್‌ನಲ್ಲಿ ನಡೆದ ಹಾಸ್ಯ ಸ್ಪರ್ಧೆಯಲ್ಲಿ ವಿಜೇತ ತಂಡವು ಪ್ರಥಮ ಸ್ಥಾನದೊಂದಿಗೆ 50,000 ರೂಪಾಯಿ ನಗದು ಮತ್ತು ಶಾಶ್ವತ ಫಲಕವನ್ನು ತಮ್ಮದಾಗಿಸಿಕೊಂಡಿತು. ಕಾರ್ಯಕ್ರಮದಲ್ಲಿ ಉತ್ತಮ ಹಾಸ್ಯ ನಟ, ಉತ್ತಮ ಹಾಸ್ಯ ನಟಿ, ಉತ್ತಮ ನಿರ್ದೇಶನ ಹಾಗೂ ಉತ್ತಮ ಸ್ಕ್ರಿಪ್ಟ್ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಿ ಕಲಾವಿದರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಟ್ಟೆ ಫ್ರೆಂಡ್ಸ್ ನಿಟ್ಟೂರಿನ ಸದಸ್ಯರು, ಊರಿನ ಹಿರಿಯರು ಮತ್ತು ಹಾಸ್ಯ ಪ್ರಿಯರು ಭಾಗವಹಿಸಿ ಸ್ಪರ್ಧಾಳುಗಳನ್ನು ಪ್ರೋತ್ಸಾಹಿಸಿದರು.