ಮೂಡುಬಿದಿರೆ:ತಾಲೂಕಿನ ದರೆಗುಡ್ಡೆ ಗ್ರಾಮದ ಕೆಲ್ಲಪುತ್ತಿಗೆ ಪರಾರಿ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದ ಸಿಡಿಲು ಬಡಿತಕ್ಕೆ ಮೂರು ದನಗಳು ಮೃತಪಟ್ಟಿವೆ. ಆನಂದ ಮೇರ ಎಂಬವರಿಗೆ ಸೇರಿದ ಹಸುಗಳು ಕೊಟ್ಟಿಗೆಯಲ್ಲಿರುವಾಗಲೇ ಈ ದುರ್ಘಟನೆ ಸಂಭವಿಸಿದೆ. ಸೋಮವಾರ ಸಂಜೆ ವೇಳೆ ಮೂಡುಬಿದಿರೆ ತಾಲೂಕಿನಾದ್ಯಂತ ಸಿಡಿಲಿನ ಅಬ್ಬರ ಹೆಚ್ಚಾಗಿದ್ದು, ಭಾರಿ ಮಳೆಯೂ ಸುರಿದಿದೆ. ಆನಂದ ಮೇರ ಈ ಮೂರು ದನಗಳಿಂದ ಹಾಲು ಸಂಗ್ರಹಿಸಿ ಡೈರಿಗೆ ನೀಡುತ್ತಿದ್ದರು. ಸಿಡಿಲು ಬಡಿದ ತೀವ್ರತೆಗೆ ಕೊಟ್ಟಿಗೆಯಲ್ಲಿದ್ದ ದನಗಳು ಸ್ಥಳದಲ್ಲೇ ಸಾವನ್ನಪ್ಪಿವೆ.
ದರೆಗುಡ್ಡೆ: ಸಿಡಿಲು ಬಡಿದು ಮೂರು ಹಸುಗಳ ಸಾವು
ದರೆಗುಡ್ಡೆ: ಸಿಡಿಲು ಬಡಿದು ಮೂರು ಹಸುಗಳ ಸಾವು