ಮೂಡುಬಿದಿರೆ: ಪುಚ್ಚೆಮೊಗರು ಸಮೀಪದ ಬಾವದಬೈಲು ಎಂಬಲ್ಲಿ ದೈವದ ಭಂಡಾರ ಮೆರವಣಿಗೆಯ ಸಂದರ್ಭದಲ್ಲಿ ಕಾಲುಸಂಕವೊಂದು ಏಕಾಏಕಿ ಮುರಿದುಬಿದ್ದ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೈವದ ಭಂಡಾರವನ್ನು ಹೊತ್ತು ಭಕ್ತರು ಸಾಲಾಗಿ ಸಂಕವನ್ನು ದಾಟುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಂಕದ ಮೇಲೆ ಏಕಕಾಲಕ್ಕೆ ಹೆಚ್ಚಿನ ಸಂಖ್ಯೆಯ ಜನರು ಏರಿದ್ದರಿಂದ ಭಾರ ತಡೆಯಲಾರದೆ ಮರದ ಸಂಕವು ಕುಸಿದಿದೆ.
.