ಮೂಡುಬಿದಿರೆ: ಈ ವರ್ಷ ನಡೆದ ಪದವಿ ಪೂರ್ವ ವಾರ್ಷಿಕ ಪರೀಕ್ಷೆಯಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಯ ವಾಣಿಜ್ಯ ವಿಭಾಗವು ಶೇಕಡಾ 100 ಫಲಿತಾಂಶ ಸಾಧಿಸಿ, ರಾಜ್ಯ ಮಟ್ಟದಲ್ಲಿ 10 ರ‍್ಯಾಂಕ್ ಗಳನ್ನು ಪಡೆದುಕೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ತಿಳಿಸಿದ್ದಾರೆ.
ಸ್ಥಳೀಯ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಕೋಟೆ ಬಾಗಿಲಿನ ಶೇಖ್ ಮಹಮ್ಮದ್ ರಮೀಝ್ (ಎಸ್‌ಎಸ್‌ಎಲ್‌ಸಿ 93%, ಪಿಯು 99.17%), ಗಂಟಲ್ ಕಟ್ಟೆಯ ಸುವಿತ್ ಭಂಡಾರಿ (ಎಸ್‌ಎಸ್‌ಎಲ್‌ಸಿ 92%, ಪಿಯು 99%), ಶಿರ್ತಾಡಿಯ ವಿಕ್ರಂ (ಎಸ್‌ಎಸ್‌ಎಲ್‌ಸಿ 91%, ಪಿಯು 98.67%), ಮೂಡುಬಿದಿರೆಯ ನಿಶ್ಚಯ ಪೈ (ಎಸ್‌ಎಸ್‌ಎಲ್‌ಸಿ 90%, ಪಿಯು 98.17%), ಸುಜಲ್ ಶೆಟ್ಟಿ (ಎಸ್‌ಎಸ್‌ಎಲ್‌ಸಿ 94%, ಪಿಯು 98%), ಖೇಚರಿ ಪಟೇಲ್ (ಎಸ್‌ಎಸ್‌ಎಲ್‌ಸಿ 66%, ಪಿಯು 94.17%), ಮೊಹಮ್ಮದ್ ಹಜೀಕ್ ಹಜೀಬ್ (ಎಸ್‌ಎಸ್‌ಎಲ್‌ಸಿ 72%, ಪಿಯು 93%), ಬೆಳ್ತಂಗಡಿಯ ದಿಯಾ ಕೆ (ಎಸ್‌ಎಸ್‌ಎಲ್‌ಸಿ 77%, ಪಿಯು 93%), ಶಿರ್ತಾಡಿಯ ಪ್ರತಿಜ್ಞಾ ಜೈನ್ (ಎಸ್‌ಎಸ್‌ಎಲ್‌ಸಿ 67%, ಪಿಯು 92.50%), ಮೂಡುಬಿದಿರೆಯ ಅದಿತಿ (ಎಸ್‌ಎಸ್‌ಎಲ್‌ಸಿ 67%, ಪಿಯು 91.67%), ಅಳಿಯೂರಿನ ಪರೀಕ್ಷಿತ್ (ಎಸ್‌ಎಸ್‌ಎಲ್‌ಸಿ 59%, ಪಿಯು 91.67%), ಕಾರ್ಕಳದ ವಿನಯಾ ಪೈ (ಎಸ್‌ಎಸ್‌ಎಲ್‌ಸಿ 71%, ಪಿಯು 90.50%), ಮರಿಯಾಡಿಯ ತನ್ಮಯ (ಎಸ್‌ಎಸ್‌ಎಲ್‌ಸಿ 64%, ಪಿಯು 89%), ಕೊಡೇಂಗಲ್ಲಿನ ತ್ರಿಷಾ (ಎಸ್‌ಎಸ್‌ಎಲ್‌ಸಿ 67%, ಪಿಯು 88.50%) ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ವಾಣಿಜ್ಯ ವಿಭಾಗ ಪಡೆದ ಒಟ್ಟು 10 ರ್ಯಾಂಕ್‌ಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳು 3 ರ‍್ಯಾಂಕ್ ಗಳನ್ನು ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗವು ಕಳೆದ ಹಲವು ವರ್ಷಗಳಿಂದ ಶೇಕಡಾ 100 ಫಲಿತಾಂಶದೊಂದಿಗೆ ಸತತ ರ‍್ಯಾಂಕ್ ಪಡೆಯುತ್ತಿದ್ದು, ಪಠ್ಯದ ಜೊತೆಗೆ CA ಫೌಂಡೇಶನ್, CS ಫೌಂಡೇಶನ್ ಮತ್ತು CLAT ತರಬೇತಿಗಳನ್ನು ಪರಿಣಿತರಿಂದ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಾಧ್ಯವಾಗಿದೆ. ಸ್ಥಳೀಯ ವಿದ್ಯಾರ್ಥಿಗಳ ಈ ಸಾಧನೆಗೆ ಪೂರ್ಣಾವಧಿ ತರಗತಿಗಳು ಹಾಗೂ ಉತ್ತಮ ಕಲಿಕಾ ವಾತಾವರಣವೇ ಪ್ರಮುಖ ಕಾರಣವಾಗಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.