ಮೂಡುಬಿದಿರೆ: ದಕ್ಷಿಣ ಕರ್ನಾಟಕದ ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್, ತನ್ನ ವಿಸ್ತರಣೆಯ ಭಾಗವಾಗಿ ಮೂಡುಬಿದಿರೆಯ ಬಸ್‌ಸ್ಟ್ಯಾಂಡ್ ಸಮೀಪದ ನವಮಿ ಪ್ಲಾಜಾದಲ್ಲಿ ನೂತನ ಮಳಿಗೆಯನ್ನು ಭಾನುವಾರ ಪ್ರಾರಂಭಿಸಿದೆ. ಆಳ್ವಾಸ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ನೂತನ ಮಳಿಗೆ ಉದ್ಘಾಟಿಸಿ, ಸಂಸ್ಥೆಯ ಸ್ಥಾಪಕರಾದ ಜಿ.ಎಲ್ ಆಚಾರ್ಯರು ಕೇವಲ ಈ ವೃತ್ತಿಯನ್ನಷ್ಟೇ ಅಲ್ಲ, ಅದರ ಜೊತೆಯಲ್ಲಿ ಸಮಾಜದ ಪರಿಕಲ್ಪನೆಯಲ್ಲಿ ಹೊಂದಿದವರು. ಯಾವ ರೀತಿ ನಾವು ವೃತ್ತಿ ಮತ್ತು ನಮ್ಮ ಧರ್ಮ, ಬೇರೆ ಬೇರೆ ಚಟುವಟಿಕೆಗಳನ್ನು ಹೇಗೆ ಮಾಡಬೇಕು ಎಂದು ನಮಗೆಲ್ಲ ಕಿವಿ ಮಾತುಗಳನ್ನು ಹೇಳಿಕೊಟ್ಟವರು. ಅದೇ ದಿಕ್ಕಿನಲ್ಲಿ ಇವತ್ತು ಅವರ ಮಗ ಬಲರಾಮ ಆಚಾರ್ಯ ಮುನ್ನಡೆಯುತ್ತಿದ್ದಾರೆ. ಕಾಲಾಂತರದಲ್ಲಿ ಒಂದು ಸಂಸ್ಥೆ ಇವತ್ತು ಐದು ಸಂಸ್ಥೆಗಳಾಗಿದ್ದು, ಮೂಡುಬಿದಿರೆಯಲ್ಲಿ ಎರಡು ವರ್ಷದ ಹಿಂದೆ ಬಂದು ಪ್ರಾರಂಭ ಮಾಡಿ, ಈಗ ಅದನ್ನು ಸ್ಥಳಾಂತರಗೊಳಿಸಿ, ಇಂದಿನ ವ್ಯವಸ್ಥೆಗೆ ಅನುಗುಣವಾಗಿ ಅಪ್‌ಗ್ರೇಡ್ ಮಾಡಿರುವುದು ಉತ್ತಮ ಬೆಳವಣಿಗೆ ಎಂದು ಶುಭ ಹಾರೈಸಿದರು. ಮಾಜಿ ಸಚಿವ ಅಭಯಚಂದ್ರ ಜೈನ್,ಶ್ರೀ ಧನಲಕ್ಷ್ಮಿ ಕ್ಯಾಶ್ಯೂ ಎಕ್ಸ್ಪೋರ್ಟ್ಸ್ನ ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ ಎಂ., ನವಮಿ ಗ್ರೂಪ್‌ನ ಆಡಳಿತ ನಿರ್ದೇಶಕ ನಂದಕುಮಾರ್ ಕುಡ್ವ, ನಿಶ್ಮತಾ ಗ್ರೂಪ್ಸ್ನ ಪ್ರವರ್ತಕ ನಾರಾಯಣ ಪಿ.ಎಂ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸ್ಥೆಗೆ ಶುಭ ಹಾರೈಸಿದರು. ಸಂಸ್ಥೆಯ ಚೇರ್ಮನ್ ಜಿ.ಎಲ್.ಬಲರಾಮ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಜಿ.ಎಲ್. ಆಚಾರ್ಯ ಜ್ಯುವೆಲರ್ಸ್ ತನ್ನ ಹೊಸ ಶೋರೂಮ್‌ನ್ನು ಮೂಡುಬಿದಿರೆಯಲ್ಲಿ ಆರಂಭಿಸಿದೆ. ಹೊಸ ತಲೆಮಾರಿನ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿಶಾಲವಾದ ಮತ್ತು ಆಕರ್ಷಕವಾದ ಜ್ಯುವೆಲರಿ ಶೋರೂಮ್‌ನ್ನು ಇಲ್ಲಿ ನಿರ್ಮಿಸಲಾಗಿದೆ. ಅತ್ಯಾಧುನಿಕ ವಿನ್ಯಾಸದ ಚಿನ್ನಾಭರಣಗಳು, ನವೀನ ಶೈಲಿಯ ಮತ್ತು ಹೊಸ ಮಾದರಿಯ ಆಭರಣಗಳನ್ನು ಗ್ರಾಹಕರಿಗೆ ಒದಗಿಸಲು ಜಿ.ಎಲ್. ಆಚಾರ್ಯ ಜ್ಯುವೆಲರ್ಸ್ ಸಜ್ಜಾಗಿದೆ. ಕರಾವಳಿ ಭಾಗದ ಗ್ರಾಹಕರಿಗೆ ಮತ್ತು ಆಭರಣ ಪ್ರಿಯರಿಗೆ ನಮ್ಮ ಸಂಸ್ಥೆಯು ಉತ್ತಮ ಗುಣಮಟ್ಟದ ಆಭರಣಗಳ ಮುಖೇನ ಸೇವೆ ನೀಡುತ್ತಾ ಬಂದಿದೆ. ಮೂಡುಬಿದಿರೆಯ ಗ್ರಾಹಕರಿಗೆ ಸುಸಜ್ಜಿತವಾದ ಈ ಹೊಸ ಶೋರೂಮ್ ಉತ್ತಮ ಅನುಭವವನ್ನು ನೀಡುತ್ತದೆ ಎಂದು ತಿಳಿಸಿದರು. ನಿರ್ದೇಶಕರಾದ ಲಕ್ಷ್ಮಿಕಾಂತ ಬಿ.ಆಚಾರ್ಯ, ರಾಜೀವ್ ಬಲರಾಮ್ ಆಚಾರ್ಯ. ಸುಧನ್ವ ಆಚಾರ್ಯ, ಕುಟುಂಬಸ್ಥರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ದೀಕ್ಷಾ ಬಂಗೇರ ಕಾರ್ಯಕ್ರಮ ನಿರೂಪಿಸಿದರು.
ಮೂಡುಬಿದಿರೆಯಲ್ಲಿ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್ ನೂತನ ಮಳಿಗೆ ಲೋಕಾರ್ಪಣೆ ಆಕರ್ಷಕ ರಿಯಾಯಿತಿಯೊಂದಿಗೆ ಗ್ರಾಹಕರ ಸೇವೆಗೆ ಸಜ್ಜಾದ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್
ಮೂಡುಬಿದಿರೆಯಲ್ಲಿ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್ ನೂತನ ಮಳಿಗೆ ಲೋಕಾರ್ಪಣೆ ಆಕರ್ಷಕ ರಿಯಾಯಿತಿಯೊಂದಿಗೆ ಗ್ರಾಹಕರ ಸೇವೆಗೆ ಸಜ್ಜಾದ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್