ಮೂಡುಬಿದಿರೆ: ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಜೆಇಇ ಮೈನ್ಸ್ನಲ್ಲಿ ಎಕ್ಸಲೆಂಟ್ ಮೂಡಬಿದಿರೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು 176 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು 97 ಪರ್ಸೆಂಟೈಲ್‌ಗಿAತ ಹೆಚ್ಚು ಸಾಧನೆ ಮಾಡಿ ಜೆಇಇ ಅಡ್ವಾನ್ಸ್ಗೆ ಅರ್ಹತೆ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು 95 ಪರ್ಸೆಂಟೈಲ್, 76 ವಿದ್ಯಾರ್ಥಿಗಳು 90 ಪರ್ಸೆಂಟೈಲ್ಗಳ ಸಾಧನೆಯನ್ನು ಮಾಡಿದ್ದಾರೆ. ಸಂಸ್ಥೆಯ ಪ್ರಜ್ವಲ್ ಎಸ್. (99.1967053), ತನ್ಮಯ್ ಎ. ಕೋಟಿ (98.8128729), ರಾಹುಲ್ ಪಿ. ಗೌಡ (98.6123529), ತನುಷ್ ಪಾಟೀಲ್ (98.3173191), ನಿಶ್ಚಲ್ ಪಿ. ಗೌಡ (98.2818077), ಭರತ್ ಆನಂದ್ (97.993185), ಪವನ್ ಕುಮಾರ್ ಆರ್ ತುಂಗಲ್ (97.9238417), ಈಶ್ವರ್ ಪುಂಡಲಿಕಪ್ಪ ಕೊಪ್ಪಲ್ (97.9251222), ಸಾತ್ವಿಕ್ ದತ್ತ ಬೋಯ (97.7979821), ನಾಗದರ್ಶನ್ ಬಿ.ಇ (97.7631655) ರಚನಾ ( 99.6231047) ಉತ್ತಮ ಸಾಧನೆ ಮಾಡಿದ್ದಾರೆ. ನಾಗದರ್ಶನ್ ಎಚ್.ಇ ಭೌತಶಾಸ್ತ್ರದಲ್ಲಿ 100 ಪರ್ಸೆಂಟೇಲ್ ಪಡೆದು ಸಾಧನೆ ಮಾಡಿದ್ದಾರೆ. ಜನರಲ್ ಮೆರಿಟ್ ಕ್ಯಾಟಗರಿಯಲ್ಲಿ ಸಂಸ್ಥೆಯ 44 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಗೆ ಅರ್ಹತೆ ಪಡೆದಿದ್ದಾರೆ. ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ವಿದ್ಯಾರ್ಥಿಗಳಿಗೆ ಅಭಿನಂಧನೆ ಸಲ್ಲಿಸಿದ್ದು, ಸಂಸ್ಥೆಯ ವಿಶೇಷ ತರಬೇತಿ ಕಾರ್ಯಕ್ರಮಗಳು, ತಜ್ಞರ ಮಾರ್ಗದರ್ಶನ, ಆನ್‌ಲೈನ್ ಹಾಗೂ ಆಫ್‌ಲೈನ್ ತರಗತಿಗಳ ಸಮನ್ವಯ, ಡೌಟ್ ಕ್ಲಿಯರಿಂಗ್ ಸೆಷನ್‌ಗಳು ಮತ್ತು ವೈಯಕ್ತಿಕ ಕೌನ್ಸಿಲಿಂಗ್ ವ್ಯವಸ್ಥೆಯು ವಿದ್ಯಾರ್ಥಿಗಳ ಸಾಧನೆಯನ್ನು ಮತ್ತಷ್ಟು ಬಲಪಡಿಸಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಜೆಇಇ ಮೈನ್ಸ್: ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾರ್ಥಿಗಳಿಂದ ಸಾಧನೆ
ಜೆಇಇ ಮೈನ್ಸ್: ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾರ್ಥಿಗಳಿಂದ ಸಾಧನೆ