ಮೂಡುಬಿದಿರೆ:ಹಿಂದೂ ಸಮಾಜವನ್ನು ಜಾತಿ ತಾರತಮ್ಯವಿಲ್ಲದೆ ಒಂದಾಗಿಸುವ ಉದ್ದೇಶದೊಂದಿಗೆ ಜವನೆರ್ ಬೆದ್ರ ಫೌಂಡೇಶನ್ ವತಿಯಿಂದ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಶ್ರೀ ರಾಮ ನಾಮ ನಗರ ಭಜನಾ ಸಂಕೀರ್ತನೆ ಕಾರ್ಯಕ್ರಮ ನಡೆಯಿತು.
ಕಳೆದ ಎರಡು ವರ್ಷಗಳಿಂದ ಈ ಸಂಕೀರ್ತನೆಯನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಅನೇಕ ಭಜನಾ ತಂಡಗಳು ಪಲ್ಲಕಿಯೊಂದಿಗೆ ಹೆಜ್ಜೆ ಹಾಕುತ್ತಾ ಸಾಗಿ ಸನಾತನ ಧರ್ಮದ ಸಮಾಗಮಕ್ಕೆ ಸಾಕ್ಷಿಯಾದವು.
ಈ ಸಂದರ್ಭದಲ್ಲಿ ಉದ್ಯಮಿ ಶ್ರೀಪತಿ ಭಟ್, ವೆಂಕಟರಮಣ ದೇವಸ್ಥಾನ ಹಾಗೂ ಹನುಮಾನ್ ದೇವಸ್ಥಾನದ ಆಡಳಿತ ಮೋಕ್ತೆಸರ ಜಿ ಉಮೇಶ್ ಪೈ, ವಕೀಲ ಚೇತನ್ ಶೆಟ್ಟಿ, ಆಶ್ವಥ್ ಪಣಪಿಲ, ಸಮಿತ ಸಂದೀಪ್ ಹಾಗೂ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಆಡಳಿತ ಮೋಕ್ತೆಸರ ಗುರುಪ್ರಸಾದ್ ಹೊಳ್ಳ ಉಪಸ್ಥಿತರಿದ್ದರು. ಜವನೆರ್ ಬೆದ್ರ ಫೌಂಡೇಶನ್ ಸಂಸ್ಥಾಪಕ ಅಮರ್ ಕೋಟೆ, ಟ್ರಸ್ಟಿಗಳು, ಸಂಚಾಲಕರು ಹಾಗೂ ಅಬ್ಬಕ್ಕ ಬ್ರಿಗೇಡ್, ಭಕುತಿ ಸಂಘ, ರಕ್ತ ನಿಧಿ ಮತ್ತು ಯುವಸಂಘಟನೆಯ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಭಜನಾ ತಂಡದ ಸದಸ್ಯರು ಉಪಸ್ಥಿತರಿದ್ದರು.
ಮೂಡುಬಿದಿರೆಯಲ್ಲಿ ರಾಮನಾಮದ ಅಲೆ: ಜವನೆರ್ ಬೆದ್ರ ಫೌಂಡೇಶನ್ ವತಿಯಿಂದ ನಗರ ಭಜನಾ ಸಂಕೀರ್ತನೆ
ಮೂಡುಬಿದಿರೆಯಲ್ಲಿ ರಾಮನಾಮದ ಅಲೆ: ಜವನೆರ್ ಬೆದ್ರ ಫೌಂಡೇಶನ್ ವತಿಯಿಂದ ನಗರ ಭಜನಾ ಸಂಕೀರ್ತನೆ