ಮೂಡುಬಿದಿರೆ: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸರ್ವೋದಯ ಪ್ರೌಢ ಶಾಲೆ ಕಲ್ಲಮುಂಡ್ಕೂರು ಶೇ.100 ಫಲಿತಾಂಶ ಸಾಧಿಸಿದೆ.

ಶಾಲೆಯಿಂದ ಒಟ್ಟು 25 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಓರ್ವ ವಿದ್ಯಾರ್ಥಿ ಡಿಸ್ಟಿಂಕ್ಷನ್, 15 ಮಂದಿ ಪ್ರಥಮ ಶ್ರೇಣಿ ಹಾಗೂ 9 ಮಂದಿ ಉತ್ತೀರ್ಣರಾಗಿದ್ದಾರೆ.

ತುಳಸಿ 549 ಅಂಕಗಳನ್ನು ಪಡೆದು ಶಾಲೆಗೆ ಅಗ್ರಸ್ಥಾನ ಗಳಿಸಿದ್ದು, ದೀಕ್ಷಿತ್ 506 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಮುಖ್ಯ ಶಿಕ್ಷಕರಾದ ಶಂಕರ್ ನಾಯ್ಕ್ ತಿಳಿಸಿದ್ದಾರೆ.