ಮೂಡುಬಿದಿರೆ: ಸಾಂಸ್ಕೃತಿಕ ನಗರಿ ಮೂಡುಬಿದಿರೆಯ ಸುವರ್ಣೋದ್ಯಮದ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭಗೊಂಡಿದೆ. ಆರು ದಶಕಗಳ ಸುದೀರ್ಘ ಪರಂಪರೆ, ನಂಬಿಕೆ ಮತ್ತು ಗುಣಮಟ್ಟದ ಮೌಲ್ಯಗಳನ್ನು ಹೊತ್ತು ತಂದಿರುವ ‘ನ್ಯೂ ಕಾಂತೇಶ್ವರ ಜ್ಯುವೆಲ್ಲರ್ಸ್’ ಸಂಸ್ಥೆಯು ಇದೀಗ ನೂತನ ಆಯಾಮದಲ್ಲಿ ಗ್ರಾಹಕರಿಗೆ ಸೇವೆ ನೀಡಲು ಸಜ್ಜಾಗಿದೆ.

1963ರಲ್ಲಿ ರಾಮಯ್ಯ ಆಚಾರ್ಯ ಅವರು ಆರಂಭಿಸಿದ ಸಣ್ಣ ಕಾಯಕ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಸ್ವತಃ ರಾಮಯ್ಯ ಆಚಾರ್ಯ ಅವರು ಮನೆಯಲ್ಲೇ ಚಿನ್ನಾಭರಣಗಳನ್ನು ತಯಾರಿಸುತ್ತಿದ್ದ ಕಾಲದಲ್ಲಿ, ಅವರ ಕೈಚಳಕ ಮತ್ತು ಪ್ರಾಮಾಣಿಕತೆಗೆ ಮಾರುಹೋದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲದೆ ಹೊರ ಜಿಲ್ಲೆಗಳ ಗ್ರಾಹಕರೂ ಅವರ ಕಡೆಗೆ ಮುಖ ಮಾಡುತ್ತಿದ್ದರು. ತಮ್ಮ ನೈಪುಣ್ಯತೆ ಮತ್ತು ಅಗಾಧ ಅನುಭವದ ಬಲದಿಂದ ಮೂಡುಬಿದಿರೆಯ ಅಚ್ಚುಮೆಚ್ಚಿನ ಸ್ವರ್ಣೋದ್ಯಮಿಯಾಗಿ ಅವರು ಗುರುತಿಸಿಕೊಂಡಿದ್ದರು. ಅವರು ಹಾಕಿಕೊಟ್ಟ ಗ್ರಾಹಕಸ್ನೇಹಿ ಸೇವೆ ಮತ್ತು ವಿಶ್ವಾಸಾರ್ಹ ವ್ಯವಹಾರದ ಮೌಲ್ಯಗಳನ್ನು ಅವರ ಪುತ್ರರಾದ ಸುರೇಶ್ ಆಚಾರ್ಯ ಮತ್ತು ದಿನೇಶ್ ಆಚಾರ್ಯ ಅವರು ಸಮರ್ಥವಾಗಿ ಮುಂದುವರಿಸಿಕೊಂಡು ಬಂದರು. ಇದೀಗ ಮೂರನೇ ತಲೆಮಾರಿನ ಸಂಜನ್ ಆಚಾರ್ಯ ಅವರು, ‘ನ್ಯೂ ಕಾಂತೇಶ್ವರ ಜ್ಯುವೆಲ್ಲರ್ಸ್’ ಮೂಲಕ ಸುಸಜ್ಜಿತ ಮಳಿಗೆಯನ್ನು ತೆರೆದು, ಪರಂಪರೆಗೆ ಆಧುನಿಕ ಸ್ಪರ್ಶ ನೀಡಿದ್ದಾರೆ. ಮೂಡುಬಿದಿರೆ ಮುಖ್ಯರಸ್ತೆಯ ಬಳಿ ನಿರ್ಮಿಸಲಾದ ‘ರಾಮಯ್ಯ ಕಾಂಪ್ಲೆಕ್ಸ್’ನಲ್ಲಿ ಈ ನೂತನ ಮಳಿಗೆಯು ಕಾರ್ಯನಿರ್ವಹಿಸುತ್ತಿದೆ. ಈ ಮಳಿಗೆಯಲ್ಲಿ ಗ್ರಾಹಕರನ್ನು ಸೆಳೆಯುವಂತಹ ಅತ್ಯಾಕರ್ಷಕ ವಿನ್ಯಾಸದ ವಜ್ರ, ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಲಭ್ಯವಿವೆ. 100% HUID ಪ್ರಮಾಣಿತ ಆಭರಣಗಳ ಜೊತೆಗೆ, ದಿನಬಳಕೆಯ ಚಿನ್ನಾಭರಣಗಳನ್ನು ಹೋಲ್‌ಸೇಲ್ ದರದಲ್ಲಿ ನೀಡಲಾಗುತ್ತಿದೆ.