ಮೂಡುಬಿದಿರೆ: ಇಲ್ಲಿನ ಮುಖ್ಯರಸ್ತೆಯ ಅಂಚೆ ಕಚೇರಿ ಬಳಿ ನಿರ್ಮಿಸಿರುವ ನೂತನ ರಾಮಯ್ಯ ಕಾಂಪ್ಲೆಕ್ಸ್ನಲ್ಲಿ 'ನ್ಯೂ ಕಾಂತೇಶ್ವರ ಜ್ಯುವೆಲ್ಲರ್ಸ್ ಏ.12 ಶುಭಾರಂಭಗೊಳ್ಳಲಿದೆ. ಬೆಳಗ್ಗೆ 10 ಗಂಟೆಗೆ ಶಾಸಕ ಉಮಾನಾಥ ಕೋಟ್ಯಾನ್ ನೂತನ ಜ್ಯುವೆಲ್ಲರ್ಸ್ ಅನ್ನು ಉದ್ಘಾಟಿಸಲಿದ್ದಾರೆ. ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಕಾಂತೇಶ್ವರ ದೇವಸ್ಥಾನದ ಧರ್ಮದರ್ಶಿ ಜೀವಂಧರ ಬಲ್ಲಾಳ್ ದೀಪ ಪ್ರಜ್ವಲನೆಗೊಳಿಸಲಿದ್ದು ಮುಖ್ಯ ಅತಿಥಿಗಳಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಅಭಯಚಂಧ್ರ ಜೈನ್, ಕೆಪಿಸಿಸಿ ಪ್ರಧಾನ ಕರ‍್ಯದರ್ಶಿ ಮಿಥುನ್ ರೈ, ಚೌಟರ ಅರಮನೆಯ ಕುಲದೀಪ ಎಂ, ಅಲಂಗಾರು ಮಹಾಲಂಗೇಶ್ವರ ದೇವಸ್ಥಾನದ ಅರ್ಚಕ ಈಶ್ವರ ಭಟ್, ಪಡ್ಯಾರಬೆಟ್ಟು ಧರ್ಮದರ್ಶಿ ಜೀವಂಧರ ಕುಮಾರ್ ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ ಎಂ., ಉದ್ಯಮಿಗಳಾದ ಶ್ರೀಪತಿ ಭಟ್, ತಿಮ್ಮಯ್ಯಶೆಟ್ಟಿ, ನಾರಾಯಣ ಪಿಎಂ, ಮೇಘನಾಥ ಶೆಟ್ಟಿ, ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಬಾಲಕೃಷ್ಣ ಆಚಾರ್ಯ, ಗಣ್ಯರಾದ ಸಂಪತ್ ಸಾಮ್ರಾಜ್ಯ, ಸಂಜೀವ ಶೆಟ್ಟಿ, ಶಂಕರ್, ಸಂತೋಷ ಶೆಟ್ಟಿ, ಸುರೇಶ್ ಶೆಟ್ಟಿ, ಹಸನಬ್ಬ ಪೆರಾಡಿ ಭಾಗವಹಿಸಲಿದ್ದಾರೆ. 64 ವರ್ಷಗಳ ಇತಿಹಾಸವಿರುವ ಮೂರು ತಲೆಮಾರುಗಳ ಅನುಭವ ಹೊಂದಿರುವ ಈ ಸಂಸ್ಥೆಯು ಗ್ರಾಹಕರ ವಿಶ್ವಾಸಾರ್ಹತೆಗೆ ಪಾತ್ರವಾಗಿದೆ. ಹೊಸ ಮಳಿಗೆಯಲ್ಲಿದಿನ ಬಳಕೆಯ ಚಿನ್ನಾಭರಣಗಳು ಹೋಲ್‌ಸೇಲ್ ದರದಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಏ.12: ಮೂಡುಬಿದಿರೆಯಲ್ಲಿ ನ್ಯೂ ಕಾಂತೇಶ್ವರ ಜ್ಯುವೆಲ್ಲರ್ಸ್ ಭಾರಂಭ
ಏ.12: ಮೂಡುಬಿದಿರೆಯಲ್ಲಿ ನ್ಯೂ ಕಾಂತೇಶ್ವರ ಜ್ಯುವೆಲ್ಲರ್ಸ್ ಶುಭಾರಂಭ