ಮಂಗಳೂರು: ಕವತ್ತಾರು ಸಿರಿ ಅಬ್ಬಗದಾರಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಪ್ರಿಲ್ 30ರಿಂದ ಮೇ 4ರವರೆಗೆ ವಾರ್ಷಿಕ ಮಹೋತ್ಸವ ನಡೆಯಲಿದೆ. ಈ ಕುರಿತು ದೇವಾಲಯದ ಆಡಳಿತ ಮೊಕ್ತೇಸರರಾದ ನೀನಾ ನಿತ್ಯಾನಂದ ಅಜಿಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಏಪ್ರಿಲ್ 30ರಂದು ಬೆಳಿಗ್ಗೆ 10.30ಕ್ಕೆ ಧ್ವಜಾರೋಹಣ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆ 6.30ಕ್ಕೆ ಉತ್ಸವ ಬಲಿ ನಡೆಯಲಿದೆ. ಮೇ 1ರಂದು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಅಂದು ರಾತ್ರಿ 8 ಗಂಟೆಗೆ ಅಜಿಲರ ಮನೆಯಿಂದ ಭಂಡಾರ ಆಗಮಿಸಿ, ಮಹಾಪೂಜೆಯೊಂದಿಗೆ ಸಿರಿ ಜಾತ್ರಾ ಮಹೋತ್ಸವ (ಕಬತ್ತಾರಾಯನ) ನಡೆಯಲಿದೆ. ಮೇ 2ರಂದು ಬೆಳಿಗ್ಗೆ 9.30ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಅಂಬೋಡಿ (ಚೆಂಡು) ಮತ್ತು 6.30ಕ್ಕೆ ಉತ್ಸವ ಬಲಿ ನಡೆಯಲಿದೆ. ಮೇ 3ರಂದು ಬೆಳಿಗ್ಗೆ 11 ಗಂಟೆಗೆ ಸಾಮೂಹಿಕ ಕಾರ್ತಿಕ ಪೂಜೆ, ಮಧ್ಯಾಹ್ನ ವರಸರಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ಕ್ಕೆ ಉತ್ಸವ ಬಲಿ, ಶ್ರೀ ಭೂತ ಬಲಿ, ಶಯನೋತ್ಸವ, ಕವಾಟಬಂಧನ ನೆರವೇರಲಿದೆ. ಮೇ 4ರಂದು ಬೆಳಿಗ್ಗೆ 8 ಗಂಟೆಗೆ ಕವಾಟೋದ್ಘಾಟನೆ, ಪ್ರಸಾದ ವಿತರಣೆ ನಡೆಯಲಿದೆ. ಅಂದು ಸಂಜೆ 6 ಗಂಟೆಗೆ ಪರಿವಾರ ಪೂಜೆ, 6.30ಕ್ಕೆ ಸಾಮೂಹಿಕ ಹೂವಿನ ಪೂಜೆ, 7 ಗಂಟೆಗೆ ಬಲಿ ಹೊರಟು ಓಕುಳಿ, ಕಟ್ಟೆ ಪೂಜೆ ಹಾಗೂ ಅವಭೃತ ಧ್ವಜಾವರೋಹಣ ನಡೆಯಲಿದೆ. ಮೇ 5ರಂದು ಸಂಪ್ರೋಕ್ಷಣೆ, ಮಂತ್ರಾಕ್ಷತೆ, ಮೇ 4ರಂದು ಸಂಜೆ ಧೂಮಾವತಿ ದೈವದ ಭಂಡಾರ ಆಗಮಿಸಿ ನೇಮೋತ್ಸವ ಹಾಗೂ ಮೇ 6ರಂದು ಬ್ರಹ್ಮಸ್ಥಾನದಲ್ಲಿ ಸಮಾರಾಧನೆ ನಡೆಯಲಿದೆ. ದೇವರ ಹರಕೆ-ಕಾಣಿಕೆಗಳನ್ನು ಸಂಗ್ರಹಿಸಲು ದೇವಸ್ಥಾನದ ವತಿಯಿಂದ ಯಾವುದೇ ಏಜೆಂಟರನ್ನು ನೇಮಿಸಿರುವುದಿಲ್ಲ. ಭಕ್ತಾದಿಗಳು ಸ್ವತಃ ಬಂದು ಹರಕೆ, ಕಾಣಿಕೆಗಳನ್ನು ಒಪ್ಪಿಸಬಹುದೆಂದು ನೀನಾ ನಿತ್ಯಾನಂದ ಅಜಿಲ ತಿಳಿಸಿದ್ದಾರೆ.