ಮೂಡುಬಿದಿರೆ: ಮಲ್ಹಾರ್ ಎಕ್ಸಿಬಿಟರ್ಸ್ ವತಿಯಿಂದ ಉಡುಪಿಯಲ್ಲಿ ಜನಪ್ರಿಯಗೊಂಡಿರುವ ಮಲ್ಹಾರ್ ಫ್ಯಾಷನ್ ಮೇಳವನ್ನು ಇದೇ ಮೊದಲ ಬಾರಿಗೆ ಮೂಡುಬಿದಿರೆಯ ಕನ್ನಡ ಭವನದಲ್ಲಿ ಏಪ್ರಿಲ್ 18 ಮತ್ತು 19ರಂದು ಆಯೋಜಿಸಲಾಗಿದೆ. ಬೆಳಿಗ್ಗೆ 10:45 ಗಂಟೆಗೆ ಮೇಳಕ್ಕೆ ಚಾಲನೆ ದೊರೆಯಲಿದೆ.
ಈ ಪ್ರದರ್ಶನದಲ್ಲಿ ಬ್ರಾಂಡೆಡ್ ಸೀರೆಗಳು, ಸಲ್ವಾರ್‌ಗಳು, ಕುರ್ತೀಸ್, ಮಕ್ಕಳ ಹಾಗೂ ಪುರುಷರ ಬಟ್ಟೆಗಳು, ಕೊರಿಯನ್ ಆಭರಣಗಳು, ಆಂಟಿಕ್ ಆಭರಣಗಳು, 1 ಗ್ರಾಂ ಆಭರಣಗಳು, ಬ್ಯಾಗ್‌ಗಳು, ಬೆಡ್‌ಶೀಟ್‌ಗಳು ಮತ್ತು ಆಕರ್ಷಕ ದಿನಸಿ ವಸ್ತುಗಳು ದೊರೆಯಲಿವೆ. ಕೇವಲ 99 ರೂಪಾಯಿಯಿಂದ ಮಾರಾಟ ಪ್ರಾರಂಭವಾಗಲಿದ್ದು, ಗ್ರಾಹಕರಿಗೆ ವಿಶೇಷ ರಿಯಾಯಿತಿಗಳು ಲಭ್ಯವಿವೆ. ಅಲ್ಲದೆ, ಹಳೆಯ ರೇಷ್ಮೆ ಸೀರೆಗಳನ್ನು ನಗದಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಶ್ವೇತಾ ಕೆ, ಶೋಭಾ ಹೆಗ್ಡೆ, ಶೋಭಾ ಸೆಕ್ವೇರಾ, ದಿವ್ಯಾ ಹೇಮಾ, ವೃಂದಾ ಶಶಿಧರ್ ಹೆಗ್ಡೆ, ವಿಶಾಲಿ ವರದರಾಜ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮೇಳಕ್ಕೆ ಚಾಲನೆ ನೀಡುವರು. ಮಲ್ಹಾರ್ ಎಕ್ಸಿಬಿಟರ್ಸ್ ಅಂಡ್ ಇವೆಂಟ್ ಪ್ರಮೋಟರ್ಸ್‌ನ ವೀಣಾ ಜೀವನ ಶೆಟ್ಟಿ ಮತ್ತು ವೈಶಾಲಿ ಸತೀಶ್ ಶೆಟ್ಟಿ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಮೂಡುಬಿದಿರೆಯಲ್ಲಿ ಮಲ್ಹಾರ್ ಫ್ಯಾಷನ್ ಮೇಳ ಏಪ್ರಿಲ್ 18, 19ರಂದು ವೈವಿಧ್ಯಮಯ ಉಡುಪುಗಳ, ಅಭರಣಗಳ ಸಂಗಮ
ಮೂಡುಬಿದಿರೆಯಲ್ಲಿ ಮಲ್ಹಾರ್ ಫ್ಯಾಷನ್ ಮೇಳ ಏಪ್ರಿಲ್ 18, 19ರಂದು ವೈವಿಧ್ಯಮಯ ಉಡುಪುಗಳ, ಅಭರಣಗಳ ಸಂಗಮ